ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು  ಅಸ್ತಂಗತ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂತಾಪ.

ವಿಜಯಪುರ,ಜನವರಿ,3,2023(www.justkannada.in): ನಿಸ್ವಾರ್ಥ ಸೇವೆ, ಸರ್ವಜನರಿಂದಲೂ ಪ್ರೀತಿ, ವಿಶ್ವಾಸದ ಆಶ್ರಯತಾಣವಾಗಿ ಪ್ರವಚನದ ಮೂಲಕ ಜನರಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗುತ್ತಿದ್ದ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ  ಅಸ್ತಂಗತರಾಗಿದ್ದು ಶ್ರೀಗಳ ನಿಧನಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ.

ಟ್ವೀಟ್ ಮೂಲಕ ಸಂತಾಪ ಸೂಚಿಸಿರುವ ರಾಹುಲ್ ಗಾಂಧಿ, ಜಗತ್ತಿನೊಳಿತಿನ ಮಾರ್ಗ ತೋರಿಸಿದ ಪ್ರಬುದ್ಧ ಚೇತನ. ಸಮಾಜಕ್ಕೆ ಅವರ ಸೇವೆ ಸ್ಮರಣೀಯ.  ಶ್ರೀಗಳು  ತಮ್ಮಸರಳಿತೆ ಜ್ಞಾನಕ್ಕಾಗಿ ಗೌರವನ್ವಿತರಾಗಿದ್ದರು. ಶ್ರೀಗಳ ಎಲ್ಲಾ ಬೋಧನೆ ಅಳವಡಿಸಿಕೊಳ್ಳಬೇಕು. ಅವರ ಅನುಯಾಯಿಗಳ ದುಃಖದಲ್ಲಿ ಭಾಗಿಯಾಗಿದ್ದೇನೆ ಎಂದು ಹೇಳಿದ್ದಾರೆ.

Key words: Sri Siddheshwar Swamiji – no more-Condolences – Congress leader -Rahul Gandhi