ಗುರುಪ್ರಸಾದ್- ಜಗ್ಗೇಶ್ ಕಾಂಬಿನೇಷನ್’ನ ‘ರಂಗನಾಯಕ’ ಶೂಟಿಂಗ್ ಶುರು

Promotion

ಬೆಂಗಳೂರು, ಆಗಸ್ಟ್ 17, 2021 (www.justkannada.in): ಗುರುಪ್ರಸಾದ್- ಜಗ್ಗೇಶ್ ಕಾಂಬಿನೇಷನ್‌ ‘ರಂಗನಾಯಕ’ ಚಿತ್ರೀಕರಣ ಶುರುವಾಗಿದೆ.

ಜಗ್ಗೇಶ್ ಸ್ಪೆಷಲ್ ಗೆಟಪ್‌ನಲ್ಲಿ ರಂಗನಾಯಕ ಶೂಟಿಂಗ್ ಸೆಟ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜಗ್ಗೇಶ್ ಅವರನ್ನು ನಿರ್ದೇಶಕ ಗುರು ಪ್ರಸಾದ್ ಹಾಗೂ ನೃತ್ಯ ಸಂಯೋಜಕ ಇರ್ಮಾನ್ ಸರ್ದಾರಿಯಾ ಅಕ್ಕ ಪಕ್ಕ ನಿಂತು ಸ್ವಾಗತಿಸಿದ್ದಾರೆ.

ಸುಮಾರು 11 ವರ್ಷದ ನಂತರ ಮಠ, ಎದ್ದೇಳು ಮಂಜುನಾಥ ಸಿನಿಮಾಗಳ ನಂತರ ಗುರುಪ್ರಸಾದ್- ಜಗ್ಗೇಶ್ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ.