ಸಮಾಜದ ಪರಿವರ್ತನೆ ಮೂಲ ಗುರು ಮಡಿವಾಳ ಮಾಚಿದೇವ- ಟಿ.ಎಸ್.ಶ್ರೀ ವತ್ಸ

Promotion

ಮೈಸೂರು,ಫೆಬ್ರವರಿ,1,2023(www.justkannada.in): ಮಡಿವಾಳ ಮಾಚಿ ದೇವರ ಜಯಂತಿಯನ್ನು ಬಿಜೆಪಿ ನಗರ ಕಛೇರಿಯಲ್ಲಿ ಹಿಂದುಳಿದ ವರ್ಗಗಳ ಮೊರ್ಚಾದ ವತಿಯಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮೈಲಾಕ್ ಅಧ್ಯಕ್ಷ ಕೌಟಿಲ್ಯ ರಘು, ಸಮಾಜದ ಅಂಕು ಡೊಂಕುಗಳನ್ನು ವಚನದ ಮೂಲಕ ಸಮಾಜದಲ್ಲಿ ಪರಿವರ್ತನೆ ಮಾಡಿದವರು ,ಬಸವಣ್ಣ ನ ಅನುಯಾಯಿಗಳು, ಬಟ್ಟೆಗಳನ್ನು ತೊಳೆಯುವ ಮೂಲಕ ನಿಮ್ಮ ಮನಸ್ಸುಗಳನ್ನು ಕೂಡ ಕಲ್ಮಶದಿಂದ ತೊಳೆದು ಸಾರ್ಥಕ ಜೀವನ ನಡೆಸಬೇಕು ಎಂದರು.

ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀ ವತ್ಸ ಮಾತನಾಡಿ ಬಿಜೆಪಿ ಸಣ್ಣ ಸಣ್ಣ ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಒಟ್ಟುಗೂಡಿಸುವ ಮುಖೇನ ತೀರ ಹಿಂದುಳಿದ ವರ್ಗದವರಿಗೆ ನ್ಯಾಯ ಕೊಡಿಸುವುದೇ ಮೂಲ ಗುರಿ, ಹಿಂದೆ ಮಾಡಿದ ಸಮಾಜ ಪುರುಷರ ಹಾದಿಯಲ್ಲೇ ನಾವೆಲ್ಲರೂ ಸಾಗೊಣ ಎಂದು ತಿಳಿಸಿದರು

ಈ ವೇಳೆ ಪಾಲಿಕೆ ಮೇಯರ್ ಶಿವಕುಮಾರ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷರಾದ ಜೋಗಿಮಂಜು, ನಗರ ಪ್ರಧಾನ ಕಾರ್ಯದರ್ಶಿ ವಾಣೀಶ್ ಕುಮಾರ್, ಗಿರೀಧರ್, ಮೊರ್ಚಾ ಪ್ರಧಾನ ಕಾರ್ಯದರ್ಶಿ ಗೋಪಾಲ್‌, ಮಣಿರತ್ನಂ, ಮಾಜಿ ನಗರ ಪಾಲಿಕೆ ಸದಸ್ಯ ಶಂಕರ್ ,ಮಹಿಳಾ ಮೊರ್ಚಾ ಅಧ್ಯಕ್ಷರಾದ ಹೇಮಾ ನಂದಿಶ್, ಮುಖಂಡರಾದ ಶ್ರೀನಿವಾಸ್, ಕೇಶವ, ಜಯರಾಮ್, ಶಿವರಾಜ್,ಮಹದೇವ್, ಜೀವನ್, ಪುರುಷೋತ್ತಮ, ಪ್ರಸಾದ್, ರಮೇಶ್, ಕಿಶೋರ್, ಸೋಮು, ರವಿ, ನಾಗೇಶ್ ಮುಂತಾದವರು ಇದ್ದರು.

Key words: Guru -Madiwala -Machi Deva –jayanthi-mysore-bjp