ಎಲ್ಲರೂ ತಮ್ಮ ಮತದಾನದ ಹಕ್ಕು ಚಲಾಯಿಸಬೇಕು- ವೋಟಿಂಗ್ ಬಳಿಕ ಪ್ರಧಾನಿ ಮೋದಿ ಮನವಿ.

kannada t-shirts

ಅಹಮದಾಬಾದ್,ಡಿಸೆಂಬರ್,5,2022(www.justkannada.in):  ಗುಜರಾತ್ ವಿಧಾನಸಭಾ ಚುನಾವಣೆಯ 2ನೇ ಹಂತದ ಮತದಾನ ಈಗಾಗಲೇ ಪ್ರಾರಂಭವಾಗಿದ್ದು, ಜನರು ಹಾಗೂ ರಾಜಕೀಯ ನಾಯಕರು ಗಣ್ಯರು ತಮ್ಮ ಮತದಾನದ ಹಕ್ಕು ಚಲಾಯಿಸುತ್ತಿದ್ದಾರೆ.

ಅಹಮದಾಬಾದ್ ​ನ ಸಬರಿಮತಿ ಕ್ಷೇತ್ರದ ರಾಣಿಪ್ ಮತಗಟ್ಟೆಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಮತದಾನ ಮಾಡಿದರು. ಬಳಿಕ ಮಾತನಾಡಿದ ಅವರು, ಎಲ್ಲರೂ ತಮ್ಮ ಹಕ್ಕು ಚಲಾಯಿಸಬೇಕು. ಗುಜರಾತ್ ಚುನಾವಣೆ ಜೊತೆಗೆ ದೇಶಾದ್ಯಂತ ಹಲವೆಡೆ ಉಪಚುನಾವಣೆಗಳು ಕೂಡ ನಡೆಯುತ್ತಿವೆ. ಈ ಚುನಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಪ್ರಧಾನಿ  ನರೇಂದ್ರ ಮೋದಿ ಜನರಿಗೆ ಮನವಿ ಮಾಡಿದರು.

ಹಾಗೆಯೇ ಮತದಾನ ಪ್ರಕ್ರಿಯೆಯೆಲ್ಲಿ ಭಾಗಿಯಾಗುತ್ತಿರುವ ಜನತೆಗೆ ಧನ್ಯವಾದ . ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವುದು ಎಲ್ಲರ ಹಕ್ಕು.  ಶಾಂತಿಯುತ ಮತದಾನಕ್ಕೆ ವ್ಯವಸ್ಥೆ ಮಾಡಿದ ಚುನಾವಣಾ ಆಯೋಗಕ್ಕೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.

Key words: gujrat election-   Prime Minister –Narendra Modi-voting

ENGLISH SUMMARY…

Everyone should exercise their franchise: PM Modi appeals to the people
Ahemdabad, December 5, 2022 (www.justkannada.in): The second phase of the Gujarath Assembly elections has started, and the political leaders along with the citizens of the state are exercising their franchise.
Prime Minister Narendra Modi exercised his franchise at the Ranip booth in Sabarmati assembly constituency limits in Ahemdabad. Speaking after voting he observed that voting is everyone’s right and everybody should vote without fail. “Along with Gujarath byelections are being held at several places in the country. I request everyone to vote,” he appealed.
He also thanked the people for voting and the Election commission for ensuring a peaceful voting process.
Keywords: Gujarath assembly election/ PM Narendra Modi/ voting

website developers in mysore