ಮಹದೇಶ್ವರ ಬೆಟ್ಟದ ಬಳಿ ಗುಜರಾತ್ ಮೂಲದ ಬಸ್ ಅಪಘಾತ.

Promotion

ಹನೂರು,ಜನವರಿ,25,2023(www.justkannada.in):  ಗುಜರಾತ್ ಮೂಲದ ಬಸ್ ಮಹದೇಶ್ವರ ಬೆಟ್ಟ ಪಾಲರ್ ಬಳಿ ಅಪಘಾತಕ್ಕೀಡಾಗಿರುವ ಘಟನೆ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟದ ಪಾಲರ್  ಘಾಟ್ ನಲ್ಲಿ ಈ ಘಟನೆ ನಡೆದಿದೆ. ಬಸ್ ನಲ್ಲಿದ್ದ ಸುಮಾರು  50 ಮಂದಿಯ ಪೈಕಿ 15-20 ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗಾಯಾಳುಗಳು ಮಧ್ಯ ಪ್ರದೇಶದ ಮೂಲದವರಾಗಿದ್ದು, ಪ್ರವಾಸಕ್ಕೆಂದು ಬಂದಿದ್ದರು. ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.  ಸ್ಥಳಕ್ಕೆ ಪೋಲಿಸರು ಭೇಟಿ, ನೀಡಿ ಪರಿಶೀಲನೆ  ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Key words: Gujarat – bus – accident -near -Mahadeshwar Hill.