ಮೈಸೂರಿನಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಮಾರ್ಗಸೂಚಿ ಪ್ರಕಟ: ನಗರದೆಲ್ಲೆಡೆ ಕಟ್ಟೆಚ್ಚರ…..

ಮೈಸೂರು,ಜನವರಿ,25,2021(www.justkannada.in):  ನಾಳೆ ಗಣರಾಜ್ಯೋತ್ಸವ ಹಿನ್ನೆಲೆ ಮೈಸೂರಿನಲ್ಲಿ ಗಣರಾಜ್ಯೋತ್ಸವ ಆಚರಣೆಗ ಮಾರ್ಗಸೂಚಿ ಪ್ರಕಟ ಮಾಡಲಾಗಿದ್ದು, ನಿಯಮ ಪಾಲನೆ ಮಾಡುವಂತೆ  ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಸೂಚನೆ ನೀಡಿದ್ದಾರೆ.jk

ಮೈಸೂರಿನ ಬನ್ನಿಮಂಟಪ ಪಂಜಿನ ಕವಾಯಿತು ಮೈದಾನದಲ್ಲಿ ಗಣರಾಜ್ಯೋತ್ಸವ  ಕಾರ್ಯಕ್ರಮ ನಡೆಯಲಿದ್ದು, ಕೊರೊನಾ ಹಿನ್ನೆಲೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ವಿಶೇಷ ಅತಿಥಿಗಳು, ಜನಪ್ರತಿನಿಧಿಗಳಿಗೆ ಪ್ರತ್ಯೇಕ ಪ್ರವೇಶವಿರಲಿದ್ದು, ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಪೊಲೀಸರು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಗೇಟ್  ಜಿ-1ರ ಮೂಲಕ, ಸಾರ್ವಜನಿಕರು ಗೇಟ್ ಜಿ-5 ಮತ್ತು ಜಿ-11ಮೂಲಕ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.  ಪರೇಡ್ ನಲ್ಲಿ ಭಾಗವಹಿಸುವವರಿಗೆ ಗೇಟ್ ಜಿ-8ರಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.Guidelines - Republic Day -Celebrations - Mysore                                

ಲೋಹಶೋಧಕ ಯಂತ್ರದ ತಪಾಸಣೆ ಬಳಿಕ  ಕಾರ್ಯಕ್ರಮಕ್ಕೆ ಪ್ರವೇಶ ನೀಡಲಾಗುತ್ತದೆ. ಯಾವುದೇ ರೀತಿಯ ಆಯುಧ, ದೊಡ್ಡಗಾತ್ರದ ಬ್ಯಾಗ್ ಗಳನ್ನು ತರಬಾರದೆಂದು ಜಿಲ್ಲಾಡಳಿತ ಪ್ರಕಟಣೆ ಹೊರಡಿಸಿದೆ.

ಇನ್ನು ನಗರದೆಲ್ಲೆಡೆ ಸಾರ್ವಜನಿಕರ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಸಿಸಿ ಟಿವಿ ಕಣ್ಗಾವಲು ಇರಿಸಲಾಗಿದೆ. ನಗರದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸುಗಮ ಸಂಚಾರಕ್ಕಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಪ್ರವಾಸಿಗರಿಗೆ ಮತ್ತು ಇತರರಿಗೆ ರೂಮ್ ಗಳನ್ನು ನೀಡುವಾಗ ಅವರ ಬಗ್ಗೆ ಹಾಗೂ ಅವರ ತಂದಿರುವ ಲಗ್ಗೇಜ್‍ ಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸುವಂತೆ, ಪೂರ್ಣ ವಿಳಾಸದ ಮಾಹಿತಿ ಪಡೆದು ರೂಂ ನೀಡುವಂತೆ ಹೋಟೆಲ್, ವಸತಿ ಗೃಹ, ಹೋಂ ಸ್ಟೇಗಳ ಮಾಲೀಕರಿಗೆ ಸೂಚನೆ ನೀಡಲಾಗಿದೆ.

ಹಾಗೆಯೇ ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳು ವಾಹನಗಳು, ವಸ್ತುಗಳು ಕಂಡು ಬಂದಲ್ಲಿ ಕೂಡಲೇ ನಗರ ಪೊಲೀಸ್ ನಿಯಂತ್ರಣ ಕೊಠಡಿ ಮಾಹಿತಿ ನೀಡುವಂತೆ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮನವಿ ಮಾಡಿದ್ದಾರೆ.

ENGLISH SUMMARY…

Guidelines for Republic Day celebration in Mysuru issued: Strict alert in Mysuru
Mysuru, Jan. 25, 2021 (www.justkannada.in): Mysuru City Police Commissioner Dr. Chandragupta has issued guidelines to be followed across Mysuru city for Republic Day celebrations tomorrow.
Republic Day celebrations have been organised at the torch-light parade ground in Banni Mantap. Face masks and social distancing has been made mandatory following the Corona pandemic. A separate entrance has been arranged for special guests and elected representatives and separate parking facilities have also been arranged.Guidelines for Republic Day celebration in Mysuru issued: Strict alert in Mysuru Mysuru, Jan. 25, 2021 (www.justkannada.in): Mysuru City Police Commissioner Dr. Chandragupta has issued guidelines to be followed across Mysuru city for Republic Day celebrations tomorrow. Republic Day celebrations have been organised at the torch-light parade ground in Banni Mantap. Face masks and social distancing has been made mandatory following the Corona pandemic. A separate entrance has been arranged for special guests and elected representatives and separate parking facilities have also been arranged. Metal detectors have been erected at the entrance. The District Administration has prohibited carrying of weapons and large bags to the venue. The police department has requested the public to inform the control room in case if anybody comes across any kind of suspicious activities or persons. Keywords: Republic Day alert in Mysuru/ Mysuru City Police Commissioner
Metal detectors have been erected at the entrance. The District Administration has prohibited carrying of weapons and large bags to the venue. The police department has requested the public to inform the control room in case if anybody comes across any kind of suspicious activities or persons.
Keywords: Republic Day alert in Mysuru/ Mysuru City Police Commissioner

Key words: Guidelines – Republic Day -Celebrations – Mysore