ಗ್ರೀನ್ ಟೀ ಮತ್ತು ಕೋವಿಡ್ 19: ಇದೋ ಇಲ್ಲೊಂದು ಸಂಶೋಧನೆ!

ನವದೆಹಲಿ, ಜೂನ್ 06, 2021 (www.justkannada.in): ಸದ್ಯ ಇಡೀ ಪ್ರಪಂಚವನ್ನು ಕಾಡುತ್ತಿರುವ ಕೋವಿಡ್ 19 ವಿರುದ್ಧ ಹೋರಾಡಲು ಗ್ರೀನ್ ಟೀ ಸಹಾಯ ಮಾಡಬಹುದೇ?

ಇಂತಹದೊಂದು ಪ್ರಶ್ನೆ ಮುಂದಿಟ್ಟುಕೊಂಡು ನಡೆಸಿದ ಅಧ್ಯಯನದಲ್ಲಿ ಹೊಸ ಮಾಹಿತಿಯೊಂದು ಹೊರಬಿದಿದ್ದೆ.

‘ಆರ್‌ಎಸ್‌ಸಿ ಅಡ್ವಾನ್ಸಸ್’ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಹಸಿರು ಚಹಾವು COVID-19 ಅನ್ನು ನಿಭಾಯಿಸಲು ಸಹಾಯ ಮಾಡುತ್ತದೆ ಎನ್ನಲಾಗಿದೆ.

ಗ್ಯಾಲೋಕಾಟೆಚಿನ್ ಎಂಬ ಹಸಿರು ಚಹಾದಲ್ಲಿ ಕಂಡುಬರುವ ಸಂಯುಕ್ತವು SARS-CoV-2 ಅನ್ನು ಎದುರಿಸುವ ಔಷಧದ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಹಸಿರು ಚಹಾದಲ್ಲಿನ ಸಂಯುಕ್ತಗಳಲ್ಲಿ ಒಂದು ಕೋವಿಡ್-19 ರ ಹಿಂದಿನ ಕೊರೊನಾ ವೈರಸ್ ಅನ್ನು ಎದುರಿಸಬಹುದು ಎಂದು ನಮ್ಮ ಸಂಶೋಧನೆಗಳು ಸೂಚಿಸಿವೆ’ ಎಂದು ಡಾ. ಮೋಹನ್ ಕುಮಾರ್ ತಿಳಿಸಿದ್ದಾರೆ.