ವರ್ಗಾವಣೆ ಬಳಿಕ ರೋಹಿಣಿ ಸಿಂಧೂರಿ ಕಡೆಯದಾಗಿ ಧನ್ಯವಾದ ಹೇಳಿದ್ದು ಯಾರಿಗೆ?

ಮೈಸೂರು, ಜೂ.06, 2021 : (www.justkannada.in news) : ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದ ಮೈಸೂರಿಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಧನ್ಯವಾದ ಹೇಳಿದ್ದಾರೆ.

ಶನಿವಾರ ತಡರಾತ್ರಿಯಷ್ಟೆ ರೋಹಿಣಿ ಸಿಂಧೂರಿ ಅವರನ್ನು ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ವರ್ಗಾಯಿಸಿ ರಾಜ್ಯ ಸರಕಾರ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ‘ ಪ್ರಿಂಟ್ ಮೀಡಿಯಾ ವಾಟ್ಸ್ ಅಪ್ ಗ್ರೂಪ್ ‘ ನಲ್ಲಿ ಹೇಳಿಕೆ ಪೋಸ್ಟ್ ಮಾಡಿರುವ ರೋಹಿಣಿ ಸಿಂಧೂರಿ, ಮೈಸೂರಿನಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಿದ್ದಕ್ಕೆ ಮೈಸೂರಿಗೆ ಧನ್ಯವಾದ ಹೇಳಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ನಾನು ನನ್ನ ಕೈಲಾದಷ್ಟು ಉತ್ತಮ ಕೆಲಸ ಮಾಡಿದ್ದೇನೆ ಎಂದಿರುವ ರೋಹಿಣಿ, ಜಿಲ್ಲಾಧಿಕಾರಿ ಗೃಹ ಕಚೇರಿಯಲ್ಲಿ ನಿರ್ಮಾಣಗೊಂಡಿರುವ ‘ಸ್ವಿಮ್ಮಿಂಗ್ ಪೂಲ್ ‘ ವಿವಾದಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಿರುವ ಸ್ಪಷ್ಟನೆ ಪ್ರತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು, ಮೈಸೂರು ಡಿಸಿಯಾಗಿ ಇದು ನನ್ನ ಕಡೆ ಹೇಳಿಕೆ ಎಂದಿದ್ದಾರೆ.

key words : mysore-DC-Rohini.sindhoori-thanks-letter

My last post as DC mysuru. Thank u Mysuru for the opportunity. I did my best under the prevailing circumstances.