ಕೆಆರ್ ಮಾರ್ಕೆಟ್ ಮತ್ತು ಕಲಾಸಿಪಾಳ್ಯ ಮಾರ್ಕೆಟ್  ತೆರೆಯಲು ಗ್ರೀನ್ ಸಿಗ್ನಲ್.

ಬೆಂಗಳೂರು,ಜುಲೈ,15,2021(www.justkannada.in):  ಕೋವಿಡ್ 2ನೇ ಅಲೆ , ಲಾಕ್ ಡೌನ್ ನಿಂದಾಗಿ ಬಂದ್ ಮಾಡಲಾಗಿದ್ದ ಬೆಂಗಳೂರಿನ ಕೆಆರ್ ಮಾರ್ಕೆಟ್ ಮತ್ತು ಕಲಾಸಿಪಾಳ್ಯ ಮಾರ್ಕೆಟ್ ತೆರೆಯಲು ಬಿಬಿಎಂಪಿ ಅನುಮತಿ ನೀಡಿದೆ.jk

ಕೋವಿಡ್‌ ಎರಡನೇ ಅಲೆ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್‌ಡೌನ್‌ ಜಾರಿಗೊಳಿಸಿದ ಹಿನ್ನೆಲೆ ಈ ಎರಡೂ ಮಾರುಕಟ್ಟೆಗಳನ್ನ ಬಂದ್ ಮಾಡಲಾಗಿತ್ತು. ಬಳಿಕ ಕೊರೋನಾ ಕಡಿಮೆಯಾದ ಹಿನ್ನೆಲೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಲಾಕ್‌ಡೌನ್‌ ಅನ್ನು ಹಂತ ಹಂತವಾಗಿ ತೆರವುಗೊಳಿಸಲಾಗಿದೆ. ಆದರೂ ಸಹ ಈ ಎರಡು ಮಾರುಕಟ್ಟೆಗಳಲ್ಲಿ ಜನ ಜಂಗುಳಿ ಉಂಟಾಗುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ  ಈ ಮಾರ್ಕೆಟ್ ಗಳನ್ನ ತೆರಯಲು ಅನುಮತಿ ನೀಡಿರಲಿಲ್ಲ.

ಇದೀಗ ಮಾರುಕಟ್ಟೆಗಳ ಮಳಿಗೆಗಳು ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಅನುಸರಿಸಿ ವಹಿವಾಟು ಪುನರಾರಂಭಿಸುವುದಕ್ಕೆ ಬಿಬಿಎಂಪಿ ಅನುಮತಿ ನೀಡಿದೆ. ಮಾರ್ಕಟ್ ನಲ್ಲಿ ವರ್ತಕರು ಹಾಗೂ ಗ್ರಾಹಕರು ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಹಾಗೂ ನಡವಳಿಕೆಗಳನ್ನು ತಪ್ಪದೇ ಪಾಲಿಸಬೇಕು. ವ್ಯಾಪಾರಿಗಳು ಹಾಗೂ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಮಳಿಗೆಯ ಮುಂದೆ ಹಳದಿ ಬಣ್ಣದ ಚೌಕಾಕಾರದ ಗುರುತು ಹಾಕಬೇಕು, ಗ್ರಾಹಕರು ತಮ್ಮ ಸರದಿಗಾಗಿ ಅದರಲ್ಲೇ ಕಾಯಬೇಕು ಎಂದು ಬಿಬಿಎಂಪಿ ಸೂಚಿಸಿದೆ.

Key words: Green signal –open- KR Market -Kalasipalya -Market.