ಸರ್ಕಾರ ರಚನೆಗೆ ಇನ್ನು ಸಿಗದ ಗ್ರೀನ್ ಸಿಗ್ನಲ್: ರಾಜ್ಯ ಬಿಜೆಪಿ ನಿಯೋಗ ಭೇಟಿ ಸಮಯ ಮುಂದೂಡಿದ ಅಮಿತ್ ಶಾ….

Promotion

ನವದೆಹಲಿ,ಜು,25,2019(www.justkannada.in): ಸಂಸತ್ ನಲ್ಲಿ ಬ್ಯುಸಿಯಾಗಿರುವ ಹಿನ್ನೆಲೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು  ರಾಜ್ಯ ಬಿಜೆಪಿ ನಿಯೋಗದ  ಭೇಟಿ ಸಮಯವನ್ನ ಮುಂದೂಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನ ಹಿನ್ನೆಲೆ ಬಿಜೆಪಿ ಸರ್ಕಾರ ರಚಿಸಲು ರಾಜ್ಯ ಬಿಜೆಪಿ ನಾಯಕರು ಹೈಕಮಾಂಡ್ ಗ್ರೀನ್ ಸಿಗ್ನಲ್ ಗಾಗಿ ಕಾಯುತ್ತಿದ್ದಾರೆ. ಈ ಸಂಬಂಧ  ಶಾಸಕ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ನಿಯೋಗ ದೆಹಲಿಗೆ ತೆರಳಿದ್ದು ಬೆಳಿಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆ ಚರ್ಚೆ ನಡೆಸಿತು.

ಬಳಿಕ ಮತ್ತೆ 3 ಗಂಟೆಗೆ ಭೇಟಿಯಾಗುವಂತೆ ಅಮಿತ್ ಶಾ ರಾಜ್ಯ ಬಿಜೆಪಿ ನಾಯಕರಿಗೆ ಸೂಚನೆ ನೀಡಿದ್ದರು. ಹೀಗಾಗಿ ರಾಜ್ಯ ಬಿಜೆಪಿ ನಿಯೋಗ ಅಮಿತ್ ಶಾ ಭೇಟಿಗೆ ತೆರಳಿದ್ದರು. ಆದರೆ ಅಮಿತ್ ಶಾ ಅವರು ಸಂಸತ್ ನಲ್ಲಿ ಬ್ಯುಸಿಯಾಗಿರುವ ಹಿನ್ನೆಲೆ ಭೇಟಿ ಸಮಯವನ್ನ ಮುಂದೂಡಿದ್ದಾರೆ.  ಮುಂದಿನ ಭೇಟಿಗೆ ಸಮಯ ತಿಳಿಸುತ್ತೇನೆ ಎಂದು ದೂರವಾಣಿ ಮೂಲಕ ರಾಜ್ಯ ನಾಯಕರಿಗೆ ತಿಳಿಸಿದ್ದಾರೆ.

ಇತ್ತ ಸರ್ಕಾರ ರಚಿಸಲು ಹೈಕಮಾಂಡ್ ಗ್ರೀನ್ ಸಿಗ್ನಲ್ ಗಾಗಿಯೇ ಬಿಎಸ್ ಯಡಿಯೂರಪ್ಪ ಕಾದು ಕುಳಿತಿದ್ದು ಒಂದು ವೇಳೆ ಸಂಜೆ ವೇಳೆಗೆ ಹೈಕಮಾಂಡ್ ಸರ್ಕಾರ ರಚನೆಗೆ ಒಪ್ಪಿಗೆ ನೀಡಿದರೇ ಇಂದು ರಾತ್ರಿಯೇ ಬಿಜೆಪಿ ಶಾಸಕಾಂಗ್ ಸಭೆ ನಡೆಸುವ ಸಾಧ್ಯತೆ ಇದೆ.

Key words: Green signal – government – formation-Amit Shah -postpones visit -state BJP delegation