Tuesday, September 15, 2026

BDA Apartments

ನವದೆಹಲಿಗೆ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್… BDA JK_Adv BDA Adv
Home Front Page ನವದೆಹಲಿಗೆ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್…

ನವದೆಹಲಿಗೆ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್…

ಬೆಂಗಳೂರು,ಜು,25,2019(www.justkannada.in): ಕಾಂಗ್ರೆಸ್ ನಾಯಕ  ಡಿ.ಕೆ ಶಿವಕುಮಾರ್ ನವದೆಹಲಿಗೆ ತೆರಳುತ್ತಿದ್ದು, ಕೋರ್ಟ್ ಕೆಲಸದ ಸಂಬಂಧ ನಾನು ದೆಹಲಿಗೆ ಹೋಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ದೆಹಲಿಗೆ ತೆರಳುವ ಮುನ್ನ ಕೆಐಎಎಲ್ ನಲ್ಲಿ  ಮಾಧ್ಯಮಗಳ ಜತೆ ಮಾತನಾಡಿದ ಡಿಕೆ ಶಿವಕುಮಾರ್ , ಕೋರ್ಟ್ ಕೆಲಸದ ಸಂಬಂಧ  ನಾನು ದೆಹಲಿಗೆ ಹೋಗುತ್ತಿದ್ದೇನೆ. ರಾಜಕೀಯದ ಯಾವುದೇ ಸಂಬಂಧ ಇಲ್ಲ. ಹೈಕಮಾಂಡ್ ನ ಯಾವ ಮುಖಂಡರನ್ನ ನಾನು ಭೇಟಿ‌ ಮಾಡೋದಿಲ್ಲ. ಸದ್ಯ ಪಾರ್ಟಿಯ ಯಾವುದೇ ಕೆಲಸ ಇಲ್ಲ  ನನಗೆ. ಆರಾಮವಾಗಿ ಫ್ರಿಯಾಗಿ ಪ್ರವೈಟ್ ಕಾರಲ್ಲಿ ಬಂದಿದ್ದೀನಿ. ದೆಹಲಿಗೆ ತೆರಳುತ್ತಿದ್ದೇನೆ ಎಂದರು.

ನನಗೆ ಅತೃಪ್ತರು ಯಾರೂ ಇಲ್ಲ ಎಲ್ಲರೂ ತೃಪ್ತರೇ. ಬಿಜೆಪಿ ಸರ್ಕಾರ ರಚನೆ ಮಾಡೋದು ಯಡಿಯೂರಪ್ಪಗೆ ಬಿಟ್ಟಿದ್ದು‌, ಸರ್ಕಾರ ರಚನೆ ಬಿಜೆಪಿಗೆ ಬಿಟ್ಟದ್ದು ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Key words: Congress leader -DK Sivakumar-went-New Delhi.