ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುದಾನ: ಸಿಎಂ ಬಿಎಸ್ ವೈ ನಡೆ ಬಗ್ಗೆ ಟೀಕಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ…

Promotion

ಬೆಂಗಳೂರು,ಮಾ,6,2020(www.justkannada.in):  ಕೃಷ್ಣಾ ಮೇಲ್ದಂಡೆ ಯೋಜನೆಗೆ ಇಂದು ವಿಧಾನಸಭೆಯಲ್ಲಿ 10 ಸಾವಿರ ಕೋಟಿ ಅನುದಾನ ಘೋಷಿಸಿದ ಸಿಎಂ ಬಿಎಸ್ ಯಡಿಯೂರಪ್ಪ ಬಗ್ಗೆ ಮಾಜಿ ಸಿಎಂ ಸಿದ್ಧರಾಮಯ್ಯ ಟೀಕಿಸಿದ್ದಾರೆ.

ಉತ್ತರ ಕರ್ನಾಟಕ ಭಾಗದ ಶಾಸಕರನ್ನ ಒಲಿಸಿಕೊಳ್ಳಲು ಈ ರೀತಿ ಹೇಳಿದ್ದಾರೆ. ಅಷ್ಟೊಂದು ಕಾಳಜಿ ಇದ್ದಿದ್ದರೇ ನಿನ್ನೆಯ ಬಜೆಟ್ ನಲ್ಲೇ ಕೃಷ್ಣ ಮೇಲ್ದಂಡೆ ಯೋಜನೆಗೆ ಅನುದಾನ ಘೋಷಣೆ ಮಾಡಬೇಕಿತ್ತು ಎಂದು ಸಿಎಂ ಬಿಎಸ್ ವೈ ಗೆ ಮಾಜಿ ಸಿಎಂ ಸಿದ್ಧರಾಮಯ್ಯ ಟಾಂಗ್ ನೀಡಿದ್ದಾರೆ.

ಈ ಬಗ್ಗೆ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಉತ್ತರ ಕರ್ನಾಟಕ ಭಾಗದ ಶಾಸಕರ ಕಣ್ಣೊರೆಸಲು ಸಿಎಂ ಬಿಎಸ್ ವೈ ಹೇಳಿಕೆ ನೀಡಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ 10 ಸಾವಿರ ಕೋಟಿ ಹಣ ನೀಡುವುದಾಗಿ ಹೇಳಿದ್ದಾರೆ.  ಬಿಎಸ್ ವೈಗೆ ಕಾಳಜಿ ಇದ್ದಿದ್ದರೇ ನಿನ್ನೆ ಬಜೆಟ್ ನಲ್ಲಿಯೇ ಘೋಷಣೆ ಮಾಡಬೇಕಿತ್ತು.   ಯೋಜನೆಗೆ 45 ಸಾವಿರ ಕೋಟಿ ಬೇಕು.  ಇಂದು ಸಿಎಂ 10 ಸಾವಿರ ನಿಗದಿ ಎಂದು ಹೇಳಿದ್ದಾರೆ. ಈಗ ಸಾಲ ತೆಗೆದುಕೊಂಡು ಕೊಡಬೇಕಷ್ಟೆ ಎಂದು ಲೇವಡಿ ಮಾಡಿದರು.

Key words: Grant -Krishna meldande Project-Former CM- Siddaramaiah- criticized -CM BSY