ಉಕ್ರೇನ್ ನಲ್ಲಿ ಮೃತಪಟ್ಟ ವಿದ್ಯಾರ್ಥಿ ನವೀನ್ ನಿವಾಸಕ್ಕೆ ರಾಜ್ಯಪಾಲರು ಭೇಟಿ,  ಸಾಂತ್ವನ.

Promotion

ಹಾವೇರಿ,ಮಾರ್ಚ್,24,2022(www.justkannada.in):  ಉಕ್ರೇನ್‌ ನಲ್ಲಿ ರಷ್ಯಾ ದಾಳಿಗೆ  ಮೃತಪಟ್ಟ ಕನ್ನಡಿಗ ವಿದ್ಯಾರ್ಥಿ ನವೀನ್‌ ನಿವಾಸಕ್ಕೆ  ಇಂದು ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್  ಭೇಟಿ  ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರುವ ನವೀನ್  ನಿವಾಸಕ್ಕೆ  ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ ನೀಡಿದರು  ನವೀನ್​ ಭಾವಚಿತ್ರಕ್ಕೆ ಹೂವು ಹಾಕಿ ನಮಸ್ಕರಿಸಿದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

ಮಾರ್ಚ್ 1, 2022ರಂದು ಉಕ್ರೇನ್​ನಲ್ಲಿ  ರಷ್ಯಾ ಶೆಲ್ ದಾಳಿಗೆ ಒಳಗಾಗಿ ನವೀನ್​ ಮೃತಪಟ್ಟಿದ್ದು ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಉಕ್ರೇನ್ ನಿಂದ ನವೀನ್ ಮೃತದೇಹವನ್ನ ತರಲಾಗಿತ್ತು. ಇನ್ನು ನವೀನ್ ಮೃತದೇಹವನ್ನ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗಿದೆ.

Key words: Governor –visits- Naveen- residence