ಕೋವಿಡ್ ಬಗ್ಗೆ ಸರ್ಕಾರ ಜನರಲ್ಲಿ ಗೊಂದಲ ಸೃಷ್ಠಿಸಬಾರದು, ಆತ್ಮವಿಶ್ವಾಸ ತುಂಬಬೇಕು- ಶಾಸಕ ಯುಟಿ ಖಾದರ್.

Promotion

ಬೆಳಗಾವಿ,ಡಿಸೆಂಬರ್,27,2022(www.justkannada.in): ಕೋವಿಡ್ ಬಗ್ಗೆ ಸರ್ಕಾರ ಜನರಲ್ಲಿ ಗೊಂದಲ ಸೃಷ್ಠಿಸಬಾರದು, ಜನರಲ್ಲಿ ಆತ್ಮವಿಶ್ವಾಸ ತುಂಬಬೇಕು ಎಂದು ಕಾಂಗ್ರೆಸ್ ಶಾಸಕ ಯುಟಿ ಖಾದರ್ ಸಲಹೆ ನೀಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಯುಟಿ ಖಾದರ್,  ಚೀನಾದಲ್ಲಿನ ಕೋವಿಡ್ ಕುರಿತ ವಾಸ್ತವ ಸ್ಥಿತಿ ತಿಳಿಯಬೇಕು.. ಕೋವಿಡ್ ಬಗ್ಗೆ ಬರುತ್ತಿರುವ ಮಾಹಿತಿ ಸತ್ಯವೇ  ಎಂಬುದನ್ನ ತಿಳಿಯಬೇಕು. ಒಮಿಕ್ರಾನ್ ರೂಪಾಂತರಿ ಬಿಎಫ್ 7 ಬಗ್ಗೆ ಜಾಗೃತಿ ಮೂಡಿಸಬೇಕು   WHO  ಕೊಟ್ಟಿರುವ ಮಾಹಿತಿ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದರು.

ಕೋವಿಡ್ ವಿಚಾರವನ್ನ ರಾಜಕೀಯವಾಗಿ ನೋಡಬೇಡಿ ಜನಸಾಮನ್ಯರ ದೃಷ್ಠಿಯಿಂದ ನೋಡಿ.  ಬೇರೆ ಪಕ್ಷದ ಕಾರ್ಯಕ್ರಮದ ಬಗ್ಗೆ ಚಿಂತಿಸುವುದಲ್ಲ ನಿಮ್ಮ ಪಕ್ಷದ ಹಿರಿಯರ ಬಗ್ಗೆ ಯೋಚಿಸಿ , ಎಲ್ಲಾ ಪಕ್ಷದ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಶಾಸಕ ಯುಟಿ ಖಾದರ್ ತಿಳಿಸಿದರು.

Key words:  government – not create -confusion – people – Covid-UT Khader.