ಬೈಕ್ ಅಪಘಾತ: ಬಿಬಿಎಂಪಿ ಹೆಲ್ತ್ ಇನ್ಸ್ ಪೆಕ್ಟರ್ ಸಾವು.

ಬೆಂಗಳೂರು,ಡಿಸೆಂಬರ್,27,2022(www.justkannada.in): ಬೈಕ್ ಅಪಘಾತ ಸಂಭವಿಸಿ ಬಿಬಿಎಂಪಿ ಹೆಲ್ತ್ ಇನ್ಸ್ ಪೆಕ್ಟರ್ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸ್ಯಾಂಕಿ ಕೆರೆ ಟಿ. ಚೌಡಯ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ಪ್ರಶಾಂತ್ ನಾಯ್ಕ್  ಮೃತಪಟ್ಟ ಹೆಲ್ತ್ ಇನ್ಸ್ ಪೆಕ್ಟರ್. ಪುಟ್ ಪಾತ್ ಗೆ ಬೈಕ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಪ್ರಶಾಂತ್ ನಾಯ್ಕ್ ಜೆಪಿ ನಗರ ನಿವಾಸಿಯಾಗಿದ್ದು,   ಸದಾಶಿವನಗರದಿಂದ ಜೆಪಿ ನಗರಕ್ಕೆ ತೆರಳುವಾಗ ಘಟನೆ ನಡೆದಿದೆ.

ಈ ಕುರಿತು ಸದಾಶಿವನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Bike- accident- BBMP- health inspector -dies.