ಬೆಂಗಳೂರು,ಅಕ್ಟೋಬರ್,15,2021(www.justkannada.in): ತುಮಕೂರಿನಲ್ಲಿ ಡಿ.ಕೆ ಶಿವಕುಮಾರ್ ಗೆ ಸಾವಿರಾರು ಕೋಟಿ ಬೇನಾಮಿ ಆಸ್ತಿ ಇದೆ ಎಂದು ಹೊಸಬಾಂಬ್ ಸಿಡಿಸಿದ್ಧ ಮಾಜಿ ಸಚಿವ ಸೊಗಡು ಶಿವಣ್ಣಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸೊಗಡು ಶಿವಣ್ಣ ಹುಚ್ಚಾಸ್ಪತ್ರೆಯಲ್ಲಿ ರಬೇಕಿತ್ತು. ಅಂತವರ ಬಗ್ಗೆ ನಾನು ಮಾತನಾಡಲು ಹೋಗೋದಿಲ್ಲ. ತುಮಕೂರಿನಲ್ಲಿ ನನ್ನ ಆಸ್ತಿ ಇದ್ದರೇ ಅವನೇ ಇಟ್ಟುಕೊಳ್ಳಲಿ. ನಾನೇ ಎಲ್ಲಾ ಆಸ್ತಿಯನ್ನ ಗಿಫ್ಟ್ ಆಗಿ ಕೊಡುತ್ತೇನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ರಾಜಕೀಯವಾಗಿ ಸೋಗಡು ಶಿವಣ್ಣಗೆ ಜಾಗವಿಲ್ಲ ಹೀಗಾಗಿ ಮಾತನಾಡುತ್ತಿದ್ದಾರೆ. ನನ್ನ ಬಗ್ಗೆ ಏನೇನೋ ಮಾತನಾಢುತ್ತಿದ್ದಾರೆ. ಮೊದಲು ಅವರು ರಾಜಕೀಯ ಜಾಗ ಹುಡುಕಿಕೊಳ್ಳಲಿ ಎಂದು ಡಿ.ಕೆ ಶಿವಕುಮಾರ್ ಟಾಂಗ್ ನೀಡಿದರು.
Key words: gift -all property-Former minister- Sogadu Sivanna –D.K Shivakumar






