ಬಿಗ್ ಬಾಸ್ ಕನ್ನಡ: 8ನೇ ಆವೃತ್ತಿಗೆ ತಯಾರಿ ಆರಂಭ

Promotion

ಬೆಂಗಳೂರು, ನವೆಂಬರ್ 25, 2020 (www.justknnada.in): ಬಿಗ್ ಬಾಸ್ ಕನ್ನಡ 8ನೇ ಆವೃತ್ತಿಗೆ ತಯಾರಿ ಆರಂಭವಾಗಿದೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ನ ಹೊಸ ಆವೃತ್ತಿಯು ಆರಂಭವಾಗಲಿದೆ ಎಂದು ಕಲರ್ಸ್ ಕನ್ನಡ ಚಾನೆಲ್ ನ ಮುಖ್ಯಸ್ಥ ಪರಮೇಶ್ವರ್ ಗುಡ್ಕಲ್ ತಿಳಿಸಿದರು.

ಬಿಗ್ ಬಾಸ್ ಕನ್ನಡದ ಹೊಸ ಆವೃತ್ತಿಯು ತಯಾರಿಯಲ್ಲಿದೆ ಎಂದು ಅವರು ತನ್ನ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದಿರುವರು. ಕಿಚ್ಚ ಸುದೀಪ್ ಅವರು ಇದನ್ನು ನಿರೂಪಿಸಲಿದ್ದಾರೆ. ಇದು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.