ಮಾಸ್ಕ್ ಇಲ್ಲದೇ ಮಗು ಜತೆ ಮನೆಯಿಂದ ಹೊರಬಂದು ಟೋಲ್ ಆದ ಸೈಫ್-ಕರೀನಾ !

Promotion

ಬೆಂಗಳೂರು, ಜೂನ್ 09, 2020 (www.justkannada.in): ಸೈಫ್​ ಹಾಗೂ ಕರೀನಾ ಕಪೂರ್​ ನಿನ್ನೆ ಮಗ ತೈಮೂರ್​ ಜೊತೆ ಮರೀನ್​ ಡ್ರೈವ್​ಗೆ ಬಂದಿದ್ದರು. ಈ ಫೋಟೋ ಟ್ರೋಲಿಗರ ಕೈಗೆ ಆಹಾರವಾಗಿದೆ.

ಸೈಫ್, ಕರೀನಾ ಮನೆಯಿಂದ ಹೊರಗಡೆ ಬಂದ ವೇಳೆ ಅಲ್ಲೇ ಇದ್ದ ಪೊಲೀಸರು ಅವರಿಗೆ ಮಗುವನ್ನು ಹೊರಗಡೆ ಕರೆದುಕೊಂಡು ಬರಬಾರದು ಎಂದು ಬುದ್ಧಿ ಹೇಳಿದ್ದಾರಂತೆ. ಈ ಸುದ್ದಿ ಹರಿದಾಡುತ್ತಿದೆ.

ಇದರಿಂದಾಗಿ ನೆಟ್ಟಿಗರು ಈ ಸೆಲೆಬ್ರಿಟಿ ಜೋಡಿಯನ್ನು ಟ್ರೋಲ್​ ಮಾಡುತ್ತಿದ್ದಾರೆ. ಮತ್ತೆ ಕೆಲವರು ಸೆಲೆಬ್ರಿಟಿಗಳಾದರೆ ಅವರಿಗೆ ಕಾನೂನು ಹಾಗೂ ನಿಯಮಗಳು ಅನ್ವಯಿಸುವುದಿಲ್ಲವೇ ಎಂದೆಲ್ಲ ಪ್ರಶ್ನಿಸುತ್ತಿದ್ದಾರೆ.

ಜತೆಗೆ ಸೈಫ್​ ಹಾಗೂ ಕರೀನಾ ಈ ವಿಡಿಯೋದಲ್ಲಿ ಮಾಸ್ಕ್​ ತೊಟ್ಟಿದ್ದಾರೆ. ಆದರೆ ಮಗ ತೈಮೂರ್​ಗೆ ಮಾಸ್ಕ್​ ಇಲ್ಲ. ಅಲ್ಲದೆ ಮತ್ತಷ್ಟು ಫೋಟೋಗಳಲ್ಲಿ ತೈಮೂರ್ ಹಾಗೂ ಸೈಫ್​ ಸಹ ಮಾಸ್ಕ್​ ಇಲ್ಲದೆ ಕಾಣಿಸಿಕೊಂಡಿದ್ದಾರೆ.