ಕೊಹ್ಲಿ ಕಳಪೆ ಫಾರ್ಮ್’ನಿಂದ ಹೊರಬರಲು ಗವಾಸ್ಕರ್ ಕೊಟ್ಟ ಸಲಹೆ ಇದು…

Promotion

ಬೆಂಗಳೂರು, ಆಗಸ್ಟ್ 26, 2021 (www.justkannada.in): ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದ ಮೊದಲ ದಿನ ಕಳಪೆ ಆಟ ಪ್ರದರ್ಶಿಸಿರುವ ಟೀಂ ಇಂಡಿಯಾ ಹಾಗೂ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಸುನಿಲ್ ಗವಾಸ್ಕರ್ ಸಲಹೆಯೊಂದನ್ನು ನೀಡಿದ್ದಾರೆ.

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ ಎಂದು ಗವಾಸ್ಕರ್ ಕ್ಯಾಪ್ಟನ್ ಕೊಯ್ಲಿಗೆ ಕಿವಿಮಾತು ಹೇಳಿದ್ದಾರೆ.

ಕಳಪೆ ಫಾರ್ಮ್’ನಲ್ಲಿರುವ ಕೊಯ್ಲಿ ತಮ್ಮ ಬ್ಯಾಟಿಂಗ್ ಸರಿಪಡಿಸಿಕೊಳ್ಳಬೇಕಿದೆ. ಇದು ಹೇಗೆ ಎಂಬುದನ್ನು ತಿಳಿಯಲು ಕೊಹ್ಲಿ ತಕ್ಷಣವೇ ಸಚಿನ್ ಗೆ ಕರೆ ಮಾಡಿ ಸಲಹೆ ಪಡೆಯಬೇಕು ಎಂದು ಗವಾಸ್ಕರ್ ಹೇಳಿದ್ದಾರೆ.

ಆಫ್ ಸ್ಟಂಪ್ ನಾಚೆ ಹೋಗುತ್ತಿದ್ದ ಬಾಲ್ ಹೊಡೆಯಲು ಹೋಗಿ ಸಚಿನ್ ಔಟಾಗುತ್ತಿದ್ದರು. ಆದರೆ ತಮಗೆ ತಾವೇ ನಿಯಂತ್ರಣ ಹಾಕಿಕೊಂಡು ಯಶಸ್ಸು ಸಾಧಿಸಿದರು. ಈಗ ಕೊಹ್ಲಿಯೂ ಅದೇ ಸ್ಥಿತಿಯಲ್ಲಿದ್ದಾರೆ ಎಂದು ಗವಾಸ್ಕರ್ ತಿಳಿಸಿದ್ದಾರೆ.