ಮೈಸೂರಿನ ಮುಕ್ತ ವಿವಿ ಕೋವಿಡ್ ಕೇರ್ ಸೆಂಟರ್’ನಲ್ಲಿ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

Promotion

ಮೈಸೂರು, ಅಕ್ಟೋಬರ್ 02, 2020 (www.justkannada.in): ನಗರದ ಹೊರವಲಯದ ಮಂಡಕಳ್ಳಿಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಕಾಡೆಮಿಕ್ ಭವನದಲ್ಲಿ ಜಿಲ್ಲಾಡಳಿತ ತೆರೆದಿರುವ ಕೋವಿಡ್ ಕೇರ್ ಸೆಂಟರ್ ಶುಕ್ರವಾರ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಯಿತು.

ಕೋವಿಡ್ ಕೇರ್ ಸೆಂಟರ್ ಅಧಿಕಾರಿಗಳು, ಡಿ ಗ್ರೂಪ್ ನೌಕರರು, ಸ್ವಚ್ಛತೆ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಎಲ್ಲ ಸೆಂಟರ್ ಹೊರ ಭಾವವನ್ನು ಸ್ವಚ್ಛಗೊಳಿಸಿದರು. ಅಲ್ಲಿ ಬೆಳೆದಿದ್ದ ಗಿಡ ಗಂಟ, ಬಳ್ಳಿಗಳನ್ನು ಕಿತ್ತರು.

ಆವರಣದಲ್ಲಿ ಇದ್ದ ಪ್ಲಾಸ್ಟಿಕ್, ಪೇಪರ್ ಗಳನ್ನು ತೆರವುಗೊಳಿಸಿದರು. ಜತೆಗೆ ನೇರಳೆ, ಮಾವು, ಹಲಸು, ಸೀಬೆ ಹಣ್ಣ ಸೇರಿದಂತೆ ಆವರಣದಲ್ಲಿ ನೂರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟರು.
ಬಳಿಕ ಗಾಂಧಿಜೀ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕೋವಿಡ್ ಕೇರ್ ನ ನೋಡಲ್ ಅಧಿಕಾರಿ ಡಾ.ಅಶೋಕ್, ವೈದ್ಯಕೀಯ ಅಧೀಕ್ಷಕ ಡಾ.ಜಗದೀಶ್, ಎಡಿಪಿಐ ಶ್ರೀಕಂಠ, ವೈದ್ಯೆ ಡಾ.ರೂಪಾ ಇತರರಿದ್ದರು.