ತೋರಿಕೆಗಾಗಿ ಗಾಂಧಿ ಸಿದ್ಧಾಂತ ಮತ್ತು ಕಾಂಗ್ರೆಸ್; ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಸಿಎಂ ಬೊಮ್ಮಾಯಿ ಟೀಕೆ

Promotion

ದಾವಣಗೆರೆ, ಸೆಪ್ಟೆಂಬರ್ 19, 2021 (www.justkannada.in): ಕಾಂಗ್ರೆಸ್ ನಾಯಕರು ತೋರಿಕೆಗಾಗಿ ಗಾಂಧಿ ಸಿದ್ಧಾಂತದ ಬಗ್ಗೆ ಮಾತನಾಡುತ್ತಾರೆ. ಆದರೆ ಇಷ್ಟು ವರ್ಷಗಳ ಕಾಲ ಧ್ವಂದ್ವದಲ್ಲಿ ದೇಶವನ್ನು ಆಳಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಟೀಕಿಸಿದ್ದಾರೆ.

ದಾವಣಗೆರೆಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ಸ್ವತಂತ್ರ ಚಳುವಳಿ ಮೇಲೆ ರಾಜಕಾರಣ ಮಾಡಿತು. ಕಾಂಗ್ರೆಸ್ ಗೆ ವೈಚಾರಿಕತೆಯಾಗಲಿ, ಸಿದ್ಧಾಂತಗಳಾಗಲಿ, ದೇಶದ ಬಗ್ಗೆ ನಿಖರ ನಿರ್ಣಯಗಳಾಗಲಿ ಇಲ್ಲ ಎಂದಿದ್ದಾರೆ.

ದೇಶವನ್ನು ದ್ವಂದ್ವದಲ್ಲಿಟ್ಟು ಪ್ರಜಾಪ್ರಭುತ್ವ ಕಾಪಾಡದ ಕಾರಣ ಈಗ ನಾವು ಅದನ್ನು ಸ್ವಚ್ಛಗೊಳಿಸುವ ಕೆಲಸ ಮಾಡಬೇಕಾಗಿದೆ. ಬಂಡವಾಳ ಶಾಹಿಗಳಿಗೆ ಪ್ರೋತ್ಸಾಹ ನೀಡಿದವರೇ ಕಾಂಗ್ರೆಸ್ಸಿಗರು. ಅವರ ದ್ವಂದ್ವದಿಂದ ದೇಶಕ್ಕೆ ಹಾನಿಯಾಗಿದೆ ಎಂದು ದೂರಿದ್ದಾರೆ.

key words: Gandhi ideology and the Congress for plausibility says cm basavaraj bommai