ಮೊದಲ ಬಾರಿ ದಸರೆಗೆ ಬಂದ ಗಜಪಡೆ ‘ಉತ್ತರಾಧಿಕಾರಿ’ ‘ಅಶ್ವತ್ಥಾಮ’ನಿಗೆ ವಿಶೇಷ ಆರೈಕೆ

ಬೆಂಗಳೂರು, ಸೆಪ್ಟೆಂಬರ್ 19, 2021 (www.justkannada.in): ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರು ಗಜಪಡೆಗೆ ಮಜ್ಜನ, ಪೌಷ್ಠಿಕ ಆಹಾರ ನೀಡಲಾಗುತ್ತಿದೆ.

ಬಿಸಿಲ ಬೇಗೆಗೆ ದಣಿವಾರಿಕೊಳ್ಳುತ್ತಿರುವ ಅಭಿಮನ್ಯು ಟೀಂಗೆ ಮಾವುತರು, ಕಾವಾಡಿಗಳು ವಿಶೇಷ ಆರೈಕೆ ಮಾಡುತ್ತಿದ್ದಾರೆ. ಮೊದಲ ಬಾರಿಗೆ ಭಾಗವಹಿಸುತ್ತಿರುವ ಅಶ್ವತ್ಥಾಮನಿಗೆ ವಿಶೇಷ ಆರೈಕೆ ಮಾಡಲಾಗುತ್ತಿದೆ.

ತಾಲೀಮಿನಲ್ಲಿ ಯಶಸ್ವಿಯಾದರೆ ಮುಂದೆ ಜಂಬೂಸವಾರಿ ಹೊರುವ ಜವಾಬ್ದಾರಿ ಅಶ್ವತ್ಥಾಮನಿಗೆ ಸಿಗಲಿದೆ,
2.85 ಮೀಟರ್ ಎತ್ತರ ವಿರುವ ಅಶ್ವತ್ಥಾಮ 3630ಕೆ.ಜಿ ತೂಕ ಇದ್ದಾನೆ, ನಾಲ್ಕೈದು ದಸರಾ ಮಹೋತ್ಸವದಲ್ಲಿ ಭಾಗಿಯಾದರೆ ಮುಂದೆ ಅಂಬಾರಿ ಹೊರುವ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ.

ದಸರಾ ಆನೆಗಳ ಆರೋಗ್ಯದ ಮೇಲೆ ಮುಂಜಾಗ್ರತಾ ಕ್ರಮವಹಿಸಲಾಗಿದೆ. ಜಂಬೂಸವಾರಿಯಲ್ಲಿ ಭಾಗವಹಿಸುವ ಆನೆಗಳ ಉದ್ದ, ಅಗಲ ಅಳತೆ ಮಾಡಲಾಗುತ್ತದೆ. ಪಶು ಆರೋಗ್ಯಾಧಿಕಾರಿ ರಮೇಶ್ ಅವರಿಂದ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.

key words: special treat for dasara jamboo ‘Ashwatthama’