ಫ್ರೆಂಚ್ ಓಪನ್ ಸೆಮಿಫೈನಲ್: ಇಂದು ಜೊಕೋವಿಕ್-ನಡಾಲ್ ಬಿಗ್ ಫೈಟ್

Promotion

ಬೆಂಗಳೂರು, ಜೂನ್ 11, 2021 (www.justkannada.in):

ಇಂದು ನಡೆಯುವ ಫ್ರೆಂಚ್‌ ಓಪನ್‌ ಸೆಮಿಫೈನಲ್‌ನಲ್ಲಿ ಘಟಾನುಘಳಿಬ್ಬರು ಮುಖಾಮುಖಿಯಾಗಲಿದ್ದಾರೆ.

ಹೌದು. ನೊವಾಕ್‌ ಜೊಕೋವಿಕ್‌ ಮತ್ತು ರಫೆಲ್‌ ನಡಾಲ್‌ ಇಂದು ಪರಸ್ಪರ ಕಾದಾಡಲಿದ್ದಾರೆ.

ಇಲ್ಲಿ ಗೆದ್ದವರು ಚಾಂಪಿಯನ್‌ ಆಗುವ ಸಾಧ್ಯತೆ ಹೆಚ್ಚು. ರಫೆಲ್‌ ನಡಾಲ್‌ ಪ್ಯಾರಿಸ್‌ನಲ್ಲಿ ಜೊಕೋವಿಕ್‌ ವಿರುದ್ಧ ಅಮೋಘ ದಾಖಲೆ ಹೊಂದಿದ್ದಾರೆ. ಆಡಿದ 8 ಪಂದ್ಯಗಳಲ್ಲಿ ಏಳನ್ನು ಗೆದ್ದು ಸಂಪೂರ್ಣ ಮೇಲುಗೈ ಸಾಧಿಸಿದ್ದಾರೆ.

ಜೊಕೋವಿಕ್‌-ಬೆರೆಟಿನಿ ನಡುವಿನ ಪಂದ್ಯ ರಾತ್ರಿ 11 ಗಂಟೆಯ ಬಳಿಕವೂ ಮುಂದುವರಿಯಿತು. ಆಗ “ಕೊರೊನಾ ಕರ್ಫ್ಯೂ’ ಜಾರಿಗೆ ಬರುವುದರಿಂದ ವೀಕ್ಷಕರನ್ನು ಹೊರಗೆ ಕಳುಹಿಸುವುದು ಅನಿವಾರ್ಯವಾಗಿತ್ತು.