ಸ್ವಾತಂತ್ರ್ಯ ಅಮೃತ ಮಹೋತ್ಸವ: PUBLIC TV ಸಿಬ್ಬಂದಿಗೆ ಭರ್ಜರಿ ಗಿಫ್ಟ್ ಕೊಟ್ಟ ರಂಗಣ್ಣ!!

Promotion

ಬೆಂಗಳೂರು,ಆಗಸ್ಟ್,15,2022(www.justkannada.in):  ಮತ್ತೊಮ್ಮೆ PUBLIC TVಯ ಖಾಸಗಿ ವಿಚಾರ ಹಂಚಿಕೊಳ್ತಿದ್ದೇನೆ. ಕಾರಣ ಸ್ಪಷ್ಟ ಕನ್ನಡ ಪತ್ರಿಕೋದ್ಯಮದಲ್ಲಿ ಅದರಲ್ಲೂ ವಿದ್ಯುನ್ಮಾನ ಪತ್ರಿಕೋದ್ಯಮದ ಮಟ್ಟಿಗೆ ಬಹಳ ಉತ್ತಮ‌ ಮಾದರಿ ಎಲ್ಲರ ಕಣ್ಮುಂದೆ ಇರಲಿ ಎನ್ನುವ ಕಾರಣಕ್ಕಾಗಿ ಮಾತ್ರ ಇದನ್ನು ಇಲ್ಲಿ ಬರೆಯುತ್ತಿದ್ದೇನೆ. PUBLIC TV ದಶಮಾನೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಐದು ತಿಂಗಳ ಹಿಂದೆಯಷ್ಟೆ ಸಂಸ್ಥೆಯ   ಎಲ್ಲಾ ಸಿಬ್ಬಂದಿಗೂ ಬೋನಸ್ ಕೊಟ್ಟಿದ್ದರು.

ಅಲ್ಲದೆ ರಂಗನಾಥ್ ಅವರು ತಮ್ಮ ಮಗಳ ಮದುವೆಯ ಸಂಭ್ರಮಕ್ಕೂ ಸಂಸ್ಥೆಯ ಎಲ್ಲಾ ಸಿಬ್ಬಂದಿಗೂ ಬೋನಸ್ ನೀಡಿದ್ದರು. ಈಗ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿದೆ. ಇದರ ಸವಿ ನೆನಪಿಗಾಗಿ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳ ಸಂಬಳವನ್ನು ದೊಡ್ಡ ಮಟ್ಟಕ್ಕೆ ಹೆಚ್ಚಿಸಿದ್ದಾರೆ. ಈ ಹೆಚ್ಚಳದ ಸಂಬಳ ಏಪ್ರಿಲ್ ನಿಂದ ಅನ್ವಯವಾಗುವ ಕಾರಣ ಐದು ತಿಂಗಳ ಅರಿಯರ್ಸ್ ಕೂಡ ಕೊಡುತ್ತಿದ್ದಾರೆ. ಸಂಸ್ಥೆ ಆರಂಭವಾದ ತಿಂಗಳಿಂದ ಇದುವರೆಗೂ ಒಂದೇ ಒಂದು ತಿಂಗಳು ಒಂದು ದಿನವೂ ಸಂಬಳ ತಡ ಮಾಡದೆ, ಪ್ರತಿ ವರ್ಷ ಸಂಬಳ ಹೆಚ್ಚಿಸುತ್ತಾ, ಹಾಗಾಗ ಬೋನಸ್ ನೀಡುತ್ತಾ ಈಗ ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಮತ್ತೆ ಸಿಬ್ಬಂದಿಗಳ ಸಂಬಳ ಹೆಚ್ಚು ಮಾಡಿರುವುದು ನಿಜಕ್ಕೂ ಮಾದರಿ ನಡೆ.

ಇದು ಸಂಸ್ಥೆಯ ಸಿಬ್ಬಂದಿಗಳ ಬಗ್ಗೆ ರಂಗನಾಥ್ ಅವರಿಗೆ ಇರುವ ಕಾಳಜಿಗೆ ಸಾಕ್ಷಿ. ಒಂದು ಸಂಸ್ಥೆಯ ಮುಖ್ಯಸ್ಥರಿಗೆ ಆರ್ಥಿಕ ಶಿಸ್ತು ಇದ್ದಾಗ, ಸಂಸ್ಥೆಯ ನೌಕರರು ತಮ್ಮ‌ ಕುಟುಂಬದ ಸದಸ್ಯರು ಎಂಬ ಮನೋಭಾವ ಇದ್ದಾಗ ಮಾತ್ರ ಇಂತಹ ಸ್ಪಂದನೆಗಳು, ಸಂಭ್ರಮಗಳು ಉಂಟಾಗುತ್ತವೆ! – ಇಂತಹ ಮಾದರಿಗಳು ಕನ್ನಡ ಮಾಧ್ಯಮದಲ್ಲಿ ಹೆಚ್ಚಾಗಬೇಕಿದೆ.

 

ಕೆಪಿ ನಾಗರಾಜ್.

ಬ್ಯೂರೋ ಮುಖ್ಯಸ್ಥರು, ಮೈಸೂರು

Key words: Freedom -Amrita Mahotsav- Ranganath- huge gift -PUBLIC TV -staff.