ಮೈಸೂರಿನಲ್ಲಿ ಫ್ರೀ ಕಾಶ್ಮಿರ್ ಪೋಸ್ಟರ್ ಪ್ರಕರಣ: ಕೋರ್ಟ್ ಮುಂಭಾಗ ನಳಿನಿ ರಂಪಾಟ…

ಮೈಸೂರು,ಜ,14,2020(www.justkannada.in):  ಮೈಸೂರಿನಲ್ಲಿ ಫ್ರೀ ಕಾಶ್ಮಿರ್ ಪೋಸ್ಟರ್ ಪ್ರಕರಣ ಸಂಬಂಧ ಮೈಸೂರು ನ್ಯಾಯಾಲಯಕ್ಕೆ ಹಾಜರಾಗಿದ್ದ ನಳಿನಿ ಬಾಲಕುಮಾರ್ ಕೋರ್ಟ್ ಮುಂಭಾಗ ರಂಪಾಟ ನಡೆಸಿರುವ ಘಟನೆ ನಡೆದಿದೆ.

ಮೈಸೂರು ವಿವಿ ಆವರಣದಲ್ಲಿ ಪ್ರತಿಭಟನೆ ವೇಳೆ ಫ್ರಿಕಾಶ್ಮೀರ್ ಎಂದು ಫೋಸ್ಟರ್ ಹಿಡಿದಿದ್ದ ನಳಿನಿ ವಿರುದ್ದ ಎಫ್ ಐಆರ್ ದಾಖಲಾಗಿತ್ತು. ಪ್ರಕರಣ ಸಂಬಂಧ ನಳಿನಿ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು.  ಈ ಸಮಯದಲ್ಲಿ ನ್ಯಾಯಾಲಯದ ಮುಂಭಾಗ ಮಾಧ್ಯಮದವರನ್ನ ಕಂಡು ನಳಿನಿ ಕೆಂಡಮಂಡಲರಾದ ಪ್ರಸಂಗ ನಡೆಯಿತು.

ಇನ್ನು ಮಾಧ್ಯಮದ ಕ್ಯಾಮಾರಗಳನ್ನ ನೋಡಿದ ನಳಿನಿ ತಾಯಿ  ನ್ಯಾಯಾಲಯದ ಮುಂಭಾಗ ಮಾರ್ಗ ಬದಲಿಸಿದರು. ಈ ವೇಳೆ ತಂದೆ ಹಾಗೂ ತಾಯಿ ಮೇಲೆ ಆಕ್ರೋಶ ಹೊರಹಾಕಿದ ನಳಿನಿ  ಪುಟ್‌ಪಾತ್‌ನಲ್ಲಿ ಕುಳಿತು ರಂಪಾಟ ನಡೆಸಿದರು. ಈ ಸಮಯದಲ್ಲಿ ತಾಯಿ ನಳಿನಿಯನ್ನ ಸಮಾಧಾನ ಮಾಡಲು ಮುಂದಾದರು. ಆದರೆ ನಳಿನಿ ನಾವ್ಯಾಕೆ ಮಾಧ್ಯಮದ ಮುಂದೆ ಹೋಗಬೇಕು ಎಂದು ಕೋಪದಿಂದಲೇ  ಹೇಳಿದರು. ನಂತರ ಮತ್ತೆ ಕ್ಯಾಮಾರಾಗಳ ಮುಂದೆಯೇ ನಳಿನಿ ನಡೆದು ಹೋಗಿದ್ದು,  ನಳಿನಿ ವರ್ತನೆಯಿಂದ ತಾಯಿ ಕಂಗಾಲಾದರು.

ನೋ ಹ್ಯೂಮಾನಿಟಿ ಎಂದು ಕೋರ್ಟ್ ಆವರಣದಲ್ಲಿ ಕೂಗಾಡಿದ ನಳಿನಿ…..

ನಳಿನಿ ಪರ ವಕಾಲತ್ತು ಹಾಕದಿರಲು  ಮೈಸೂರು ವಿವಿಧೋದ್ದೇಶ ಸಹಕಾರ ಸಂಘ ನಿರ್ಧಾರ ಮಾಡಿರುವ ಹಿನ್ನೆಲೆ ಇದರಿಂದ ಅಸಮಾಧಾನಗೊಂಡ ನಳಿನಿ  ಕೋರ್ಟ್ ಆವರಣದಲ್ಲೇ ನೋ ಹ್ಯೂಮಾನಿಟಿ ಎಂದು ಕೂಗಾಡಿದರು.

Key words: Free Kashmir -Poster Case – Mysore- Nalini -in front – court.