Saturday, August 8, 2026

BDA Apartments

Home Front Page ಡಾ.ಸರೋಜಿನಿ ಮಹಿಷ ಪರಿಷ್ಕೃತ ವರದಿ ಜಾರಿ ಮಾಡುವಂತೆ ಆಗ್ರಹಿಸಿ ಮೈಸೂರಿನಲ್ಲಿ ಸಹಿ ಸಂಗ್ರಹ ಚಳುವಳಿ…

ಡಾ.ಸರೋಜಿನಿ ಮಹಿಷ ಪರಿಷ್ಕೃತ ವರದಿ ಜಾರಿ ಮಾಡುವಂತೆ ಆಗ್ರಹಿಸಿ ಮೈಸೂರಿನಲ್ಲಿ ಸಹಿ ಸಂಗ್ರಹ ಚಳುವಳಿ…

ಮೈಸೂರು,ಜ,14,2020(www.justkannada.in):  ಡಾ.ಸರೋಜಿನಿ ಮಹಿಷ ಪರಿಷ್ಕೃತ ವರದಿ ಜಾರಿ ಮಾಡುವಂತೆ ಒತ್ತಾಯಿಸಿ ಮೈಸೂರಿನಲ್ಲಿ ಸಹಿಸಂಗ್ರಹ ಚಳುವಳಿ ನಡೆಸಲಾಯಿತು.

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಕದಂಬ ಸೈನ್ಯ ಕನ್ನಡ ಸಂಘಟನೆಯಿಂದ  ಸಹಿ ಸಂಗ್ರಹ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಕನ್ನಡಿಗೆ ಉದ್ಯೋಗಾವಕಾಶ ನೀಡುವಂತೆ ಸಿಎಂಗೆ ಮನವಿ ಸಲ್ಲಿಸುವುದು. ಈ ಬಗ್ಗೆ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ಮಾಡುವಂತೆ ಒತ್ತಾಯ ಮಾಡಲಾಯಿತು.

ಐಟಿ, ಬಿಟಿ ಹಾಗೂ ಬ್ಯಾಂಕ್ ಕಂಪನಿಗಳಿಗಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವಂತೆ  ಕದಂಬ ಸೈನ್ಯ ಕನ್ನಡ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದರು.

Key words: Signature Collection Movement – Mysore –protest- implementation -Dr. Sarojini Mahisha -report