ಕೇರಳದ ಎಲ್ಲ ಜನರಿಗೆ ಉಚಿತವಾಗಿ ಕೋವಿಡ್-19 ಲಸಿಕೆ ಲಭ್ಯ : ಸಿಎಂ ಪಿಣರಾಯಿ ವಿಜಯನ್

ತಿರುವನಂತಪುರಂ,ಡಿಸೆಂಬರ್,13,2020(www.justkannda.in): ಕೇರಳದ ಎಲ್ಲ ಜನರಿಗೆ ಉಚಿತವಾಗಿ ಕೋವಿಡ್-19 ಲಸಿಕೆ ಲಭ್ಯವಾಗಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.logo-justkannada-mysore

ಲಸಿಕೆ ನೀಡಲು ಯಾರಿಗೂ ಶುಲ್ಕ ವಿಧಿಸುವುದಿಲ್ಲ

ಲಸಿಕೆ ನೀಡಲು ಯಾರಿಗೂ ಶುಲ್ಕ ವಿಧಿಸುವುದಿಲ್ಲ. ಇದು ಕೇರಳ ಸರ್ಕಾರದ ನಿಲುವು. ತಮಿಳುನಾಡು ಮತ್ತು ಮಧ್ಯಪ್ರದೇಶ ಸೇರಿದಂತೆ ಅನೇಕ ರಾಜ್ಯಗಳು ಉಚಿತವಾಗಿ ಕೊರೋನಾ ಲಸಿಕೆ ನೀಡುವ ಘೋಷಣೆ ಮಾಡಿವೆ.

ಭಾರತ್ ಬಯೋಟೆಕ್, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಫಿಜರ್ ಅಭಿವೃದ್ಧಿಪಡಿಸಿದ ಲಸಿಕೆಗಳು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ ಪರಿಶೀಲನೆ ಹಂತದಲ್ಲಿದೆ. 5 ಲಸಿಕೆಗಳು ದೇಶದಲ್ಲಿ ಕ್ಲಿನಿಕಲ್ ಪ್ರಯೋಗಗಳ ವಿವಿಧ ಹಂತಗಳಲ್ಲಿವೆ.

ಕೇರಳ ಸಿಎಂ ರಾಜ್ಯದ ಎಲ್ಲಾ ಜನರಿಗೆ ಉಚಿತವಾಗಿ ಲಸಿಕೆ ನೀಡುವ ಘೋಷಣೆ ಮಾಡಿದ್ದು, ಕೇಂದ್ರದಿಂದ ರಾಜ್ಯಕ್ಕೆ ನೀಡಲಾಗುವ ಲಸಿಕೆ ಪ್ರಮಾಣದ ಬಗ್ಗೆ ತಿಳಿದಿಲ್ಲ ಎಂದು ತಿಳಿಸಿದ್ದಾರೆ.

Free-all-people-Kerala-Covid-19-Vaccine- Available-CM Pinarayi Vijayan

key words : Free-all-people-Kerala-Covid-19-Vaccine- Available-CM Pinarayi Vijayan