ಈ ದೇಶ ಲೂಟಿ ಆಗೋಕೆ ಕಾಂಗ್ರೆಸ್ ಕಾರಣ: ಕೈ ನಾಯಕರು ಜನರ ಕ್ಷಮೆಯಾಚಿಸಬೇಕು- ಗೃಹ ಸಚಿವ ಅರಗ ಜ್ಞಾನೇಂದ್ರ.

Promotion

ಬೆಂಗಳೂರು,ಜುಲೈ,22,2022(www.justkannada.in):  ಮೂರ್ನಾಲ್ಕು ತಲೆಮಾರಿಗಾಗುವಷ್ಟು ಮಾಡಿಕೊಂಡಿದ್ದೇವೆ ಎಂಬ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಟಾಂಗ್ ನೀಡಿದ್ದಾರೆ.

ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಸಚಿವ ಅರಗ ಜ್ಞಾನೇಂದ್ರ, ರಮೇಶ್ ಕುಮಾರ್ ಆಗಾಗ ಇಂತಹ ಸತ್ಯ ಹೇಳುತ್ತಾರೆ.  ಸತ್ಯ ಹೇಳೋಕೆ ರಮೇಶ್ ಕುಮಾರ್ ಗೆ ಮಾತ್ರ ಸಾಧ್ಯ. ಕಾಂಗ್ರೆಸ್ಸಿಗರು ಲೂಟಿ ಮಾಡಿದ್ದಾರೆ. ಹೀಗಾಗಿ ಅವರು ದೇಶದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ದೇಶದ ಸಂಪತ್ತನ್ನ ಕಾಂಗ್ರೆಸ್ಸಿಗರು ಲೂಟಿ ಮಾಡಿದ್ದಾರೆ. ಇದಕ್ಕೆ ರಮೇಶ್ ಕುಮಾರ್ ಹೇಳಿಕೆ ಸಾಕ್ಷಿ.  ಈ ದೇಶ ಲೂಟಿ ಆಗೋಕೆ ಕಾಂಗ್ರೆಸ್ ಕಾರಣ. ತಲೆಮಾರುಗಟ್ಟಲೇ ತಿಂದ ಹಣವನ್ನ ಕಕ್ಕಿಸಬೇಕು.ಲೂಟಿ ಮಾಡಿದ ಹಣವನ್ನ ಖಜಾನೆಗೆ ತುಂಬಿಸಬೇಕು ಎಂದರು.

Key words: former speaker-Ramesh kumar-home minister-Araga jnanendra