ಹೆತ್ತ ತಾಯಿಯನ್ನೇ ಕೊಂದು ಹೈಡ್ರಾಮಾ ಮಾಡಿದ್ದ ಪುತ್ರನ ಬಂಧನ.

ಚಿಕ್ಕಮಗಳೂರು,ಜುಲೈ,22,2022(www.justkannada.in): ಹಣಕಾಸಿನ ವಿಚಾರಕ್ಕೆ ಹೆತ್ತ ತಾಯಿಯನ್ನೇ ಕೊಂದು ಹೈಡ್ರಾಮಾ ಮಾಡಿದ್ಧ ಪುತ್ರನನ್ನ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಮಗಳೂರು ತಾಲ್ಲೂಕಿನ ಹಚ್ಚಡಮನೆ ಗ್ರಾಮದಲ್ಲಿ  ಈ ಘಟನೆ ನಡೆದಿದೆ. ಬಸವರಾಜ್ ಬಂಧಿತ ಆರೋಪಿ. ಬಸವರಾಜ್ ತನ್ನ ತಾಯಿ ಲತಾ  ಅವರ ತಲೆಗೆ ಒಲೆ ಊದುವ ಕೊಳವೆಯಿಂದ  ಹೊಡೆದು ಕೊಂದಿದ್ದಾನೆ. ಬಳಿಕ ಡೀಸೆಲ್ ಹಾಕಿ ಸುಟ್ಟು ಹಾಕಿದ್ದ ಬಸವರಾಜ್ ಮಲಗಿದ್ದ ವೇಳೆ ಮೊಂಬತ್ತಿ ಬೆಂಕಿ ತಗುಲಿ ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರನ್ನ ನಂಬಿಸಿ ತರಾತುರಿಯಲ್ಲಿ ಶವಶಂಸ್ಕಾರ ನಡೆಸಿದ್ದಾರೆ.

ಜುಲೈ 18 ರಂದು ನಡೆದ ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದು ತನಿಖೆಯಲ್ಲಿ  ಪುತ್ರನೇ ತಾಯಿಯನ್ನ ಕೊಂದಿರುವ ವಿಚಾರ ಬೆಳಕಿಗೆ ಬಂದಿದೆ. ಇದೀಗ  ಆಲ್ದೂರು ಠಾಣಾ ಪೊಲೀಸರು ಆರೋಪಿ ಬಸವರಾಜ್ ನನ್ನ ಬಂಧಿಸಿದ್ದಾರೆ.

Key words: Arrest – son – killed -his mother