ಸಿಎಂ ಬಿಎಸ್ ವೈರಿಂದ ಡೆಲ್ಲಿ ಟು ಬೆಂಗಳೂರು, ಬೆಂಗಳೂರು ಟು ದೆಹಲಿ ದಂಡಯಾತ್ರೆ- ಲೇವಡಿ ಮಾಡಿದ ಮಾಜಿ ಸಂಸದ ವಿ.ಎಸ್ ಉಗ್ರಪ್ಪ…..

ಬೆಂಗಳೂರು,ಆ,16,2019(www.justkannada.in): ಸಿಎಂ ಬಿಎಸ್ ಯಡಿಯೂರಪ್ಪ  ಬೆಂಗಳೂರು ಟು ದೆಹಲಿ, ದೆಹಲಿ ಟು ಬೆಂಗಳೂರು ದಂಡಯಾತ್ರೆ ಮಾಡುತ್ತಿದ್ದಾರೆ. ಯಡಿಯೂರಪ್ಪ ಸ್ಥಿತಿ ನೋಡಿದರೆ ಗಾಬರಿಯಾಗುತ್ತಿದೆ ಎಂದು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಲೇವಡಿ ಮಾಡಿದರು.

ಕೆಪಿಸಿಸಿ ಕಚೇರಿಯಲ್ಲಿ  ಇಂದು ಮಾತನಾಡಿದ ಮಾಜಿ ಸಂಸದ ಉಗ್ರಪ್ಪ, ಬಿಎಸ್ ವೈ ಅವರ ಸ್ವಾಭಿಮಾನ ಶೂನ್ಯವಾಗಿದೆ. ಏನಾದ್ರೂ ಪರವಾಗಿಲ್ಲ ಅಧಿಕಾರ ಸಾಕು ಅಂತಿದ್ದಾರೆ. ಪ್ರವಾಹದಿಂದ 1 ಲಕ್ಷ ಕೋಟಿ ಹಾನಿಯಾಗಿದೆ. ಪರಿಹಾರ ಕೇಳಿದರೆ ನೋಟ್ ಫ್ರಿಂಟ್ ಮಿಷಿನ್ ಇಲ್ಲ ಅಂತಾರೆ. ಆದರೆ ನೋಟ್ ಕೌಂಟ್ ಮೆಷಿನ್ ಅವರ ಮನೆಯಲ್ಲಿವೆ. ಪ್ರವಾಹ ಹಿನ್ನೆಲೆ ನೆರೆ ಸಂತ್ರಸ್ತರಿಗೆ ಯುದ್ಧದೋಪಾದಿಯಲ್ಲಿ ಪರಿಹಾರ ನೀಡಬೇಕಿತ್ತು. ಆದರೆ ಅದರ ಬಗ್ಗೆ ಗಮನವನ್ನೇ ಹರಿಸಿಲ್ಲ ಎಂದು ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯಕ್ಕೆ ಅಮಿತ್ ಶಾ ಭೇಟಿ ನೀಡಿದ್ದರು. ನಿರ್ಮಲಾ ಸೀತಾರಾಮನ್ ಕೂಡ ಪರಿಶೀಲಿಸಿ ಹೋಗಿದ್ದರು. ಬಂದವರು ಪ್ರವಾಹ ಪರಿಸ್ಥಿತಿಯ ನಷ್ಟದ ಬಗ್ಗೆ ಕೇಂದ್ರಕ್ಕೆ ಮಾಹಿತಿಯನ್ನ ನೀಡಬೇಕಿತ್ತು. ಹೋಗಲಿ ಸಿಎಂ ಆದ್ರೂ ನಷ್ಟವನ್ನ ಅಂದಾಜಿಸಬಹುದಿತ್ತು. ಆದರೆ ಅವರು ನಷ್ಟದ ಅಂದಾಜು ಮಾಡಿಸಿಲ್ಲ. ಸಂತ್ರಸ್ಥರ ಮೇಲೆ ಲಾಠಿ ಚಾರ್ಜ್ ಮಾಡಿಸಿದ್ದಾರೆ ಎಂದು  ವಿಎಸ್ ಉಗ್ರಪ್ಪ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಅಂದು ಮನಮೋಹನ್ ಸಿಂಗ್ ರಾಯಚೂರಿಗೆ ಭೇಟಿ ನೀಡಿದ್ದರು. ಸ್ಥಳದಲ್ಲೇ 1600 ಕೋಟಿ ಅನುದಾನ ಘೋಷಿಸಿದ್ದರು. ಆದರೆ ಪ್ರಧಾನಿ ಮೋದಿಯವರು ಭೇಟಿಯನ್ನೇ ಕೊಟ್ಟಿಲ್ಲ. ಮಹಾರಾಷ್ಟ್ರಕ್ಕೆ ನಾಲ್ಕು ಸಾವಿರ ಕೋಟಿ. ಗುಜರಾತ್ ಗೆ ೫ ಸಾವಿರ ಕೋಟಿ ನೀಡಿದ್ದೀರಾ. ಆದರೆ 25 ಸಂಸದರನ್ನ ಗೆಲ್ಲಿಸಿದ್ರೂ ರಾಜ್ಯಕ್ಕೆ ನೀಡಿಲ್ಲವೇಕೆ..? ಜನರ ಬದುಕಿನಲ್ಲಿ ನೀವು ಆಟವಾಡಬೇಡಿ. ಅಮಿತ್ ಶಾ,ಮೋದಿ,ಯಡಿಯೂರಪ್ಪ ಜನರ ಬದುಕಿನ ಜತೆ ಆಟವಾಡುತ್ತಿದ್ದಾರೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು

ರಾಜ್ಯದಲ್ಲಿ ಭೀಕರ ಪ್ರವಾಹಕ್ಕೆ ತುತ್ತಾದ ಹಿನ್ನೆಲೆ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ತಕ್ಷಣವೇ ಕೇಂದ್ರ 5 ಸಾವಿರ ಕೋಟಿ ನೀಡಬೇಕು. ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು. ಇಲ್ಲವಾದರೆ ನಾವು ಹೋರಾಟ ಮಾಡಬೇಕಾಗುತ್ತದೆ. ಸದನದ ಒಳಗೆ,ಹೊರಗೆ ಮಾಡಬೇಕಾಗುತ್ತದೆ ಎಂದು ಕೇಂದ್ರ,ರಾಜ್ಯ ಸರ್ಕಾರಕ್ಕೆ ಉಗ್ರಪ್ಪ ಎಚ್ಚರಿಕೆ ನೀಡಿದರು.

ನಾವಾಗಿದ್ರೆ ಅಲ್ಲಿಯೇ ರಾಜೀನಾಮೆ ಬಿಸಾಕಿ ಬರ್ತಿದ್ದವು…..

ಬರ, ಪ್ರವಾಹದ ವಿಚಾರದಲ್ಲಿ ಹಸ್ತಕ್ಷೇಪ ಮಾಡಲ್ಲ. ರಾಜಕೀಯ ಲಾಭ ಪಡೆಯುವ ಕೆಲಸ ಮಾಡಲ್ಲ. ಜನರ ಕಷ್ಟದಲ್ಲಿ ಭಾಗಿಯಾಗುವುದಷ್ಟೇ ನಮ್ಮ ಗುರಿ. ಸಂಪುಟ ರಚನೆಗೆ ನಿಮ್ಮ ಹೈಕಮಾಂಡ್ ಬಿಡುತ್ತಿಲ್ಲ. ನೀವು ಅದೇಗೆ ನಿಮ್ಮ ಹೈಕಮಾಂಡ್ ಸಹಿಸಿಕೊಂಡಿದ್ದೀರಾ..? ಎಂದು ಪ್ರಶ್ನಿಸಿದ ವಿ.ಎಸ್ ಉಗ್ರಪ್ಪ, ನಿಮಗೆ ಸ್ವಲ್ಪನಾದರೂ ಸ್ವಾಭಿಮಾನ ಬೇಡವೇ. ನಾವಾಗಿದ್ದರೆ ಅಲ್ಲಿಯೇ ರಾಜೀನಾಮೆ ಬಿಸಾಕಿ ಬರ್ತಿದ್ದೆವು ಎಂದು ಬಿಎಸ್ ವೈಗೆ ಪ್ರವೋಕ್ ಮಾಡಿದರು.

Key words: Former MP -VS Ugrappa -CM BS yeddyurappa- Delhi to Bangalore,-Bangalore to Delhi.