ಬಳಸಿ ಬಿಸಾಡುವ ಪಾಠವನ್ನು ನೀವು ಬಹುಬೇಗ ಕಲಿತುಬಿಟ್ಟಿರಿ-ಹೆಚ್.ಡಿಕೆ ವಿರುದ್ದ ಮತ್ತೆ ಗುಡುಗಿದ ಮಾಜಿ ಸಿಎಂ ಸಿದ್ಧರಾಮಯ್ಯ…

Promotion

ಬೆಂಗಳೂರು,ಸೆ,24,2019(www.justkannada.in): ನಾನು ಸಿದ್ದರಾಮಯ್ಯ ಸಾಕಿರುವ ಗಿಣಿ ಅಲ್ಲ. ಸಿದ್ಧರಾಮಯ್ಯರಿಂದ ನಾನು ಸಿಎಂ ಆಗಿರಲಿಲ್ಲ ಎಂದು ಟೀಕಿಸಿದ್ದ  ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ದ  ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಇದೀಗ ಮತ್ತೆ ಗುಡುಗಿದ್ದಾರೆ.

ಟ್ವಿಟ್ಟರ್ ನಲ್ಲಿ ಟ್ವಿಟ್ ಮಾಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ಸನ್ಮಾನ್ಯ  @hd_kumaraswamy ಅವರೇ, ನಿಮ್ಮನ್ನು ನಾನು ಸಾಕಿದ್ದೇನೆ ಎಂದು ಎಲ್ಲಿ ಹೇಳಿದ್ದೆ..? ನಿಮ್ಮನ್ನು ಸಾಕಿದ್ದು ಹೆಚ್. ಡಿ ದೇವೇಗೌಡರು. ಆದರೆ ಬಳಸಿಕೊಂಡಿದ್ದು ಮಾತ್ರ ನಮ್ಮಂತಹವರನ್ನು.  ಬಳಸಿ ಬಿಸಾಡುವ ಪಾಠವನ್ನು ನೀವು ಬಹುಬೇಗ ಕಲಿತು ಬಿಟ್ಟಿರಿ. ಈ ಬಗ್ಗೆ @BSYBJP ಅವರನ್ನು ಕೇಳಿ, ಹೇಳ್ತಾರೆ ಎಂದು ಲೇವಡಿ ಮಾಡಿದ್ದಾರೆ.

ಹಾಗೆಯೇ ಟ್ವಿಟ್ ವಾಗ್ಬಾಣ ಮುಂದುವರೆಸಿದ ಸಿದ್ಧರಾಮಯ್ಯ, ಸನ್ಮಾನ್ಯ @hd_kumaraswamy ಅವರೇ, ನನ್ನುನ್ನು ಕೂಡಾ ಬೆಳೆಸಿದ್ದು ರಾಜ್ಯದ ಜನತೆ. ನಮ್ಮ ಪಕ್ಷಕ್ಕೆ ಜನ ನೀಡಿದ ಆಶೀರ್ವಾದ ಬಲದಿಂದ ನಾನು ಐದು ವರ್ಷ ಮುಖ್ಯಮಂತ್ರಿಯಾಗಿದ್ದೆ ಹೊರತು ಯಾವುದೇ ಹದ್ದು-ಗಿಣಿಗಳ ಹಂಗಿನಿಂದಲ್ಲ. ಬೇರೆ ಪಕ್ಷಗಳ ಹೆಗಲ ಮೇಲೆ ಕೂತು ಮುಖ್ಯಮಂತ್ರಿಯಾದ‌ @hd_kumaraswamy ಅವರೇ, ನೀವು ಸ್ವಂತ ಬಲದಿಂದ ಮುಖ್ಯಮಂತ್ರಿಯಾಗಲೂ ಎಂದಾದರೂ ಸಾಧ್ಯವೇ? ಎಂದು ಸಿದ್ಧರಾಮಯ್ಯ ಟ್ವಿಟ್ಟರ್ ನಲ್ಲಿ ಪ್ರಶ್ನೆ ಹಾಕಿದ್ದಾರೆ.

Key words: former minister- siddaramaiah- hd kumaraswamy-twitter