ಎಸ್ ಐಟಿಯಿಂದ  ಮಾಜಿ ಸಚಿವ ರೋಷನ್ ಬೇಗ್ ವಿಚಾರಣೆ ಅಂತ್ಯ:  ಮತ್ತೆ ಹಾಜರಾಗುವಂತೆ ಸೂಚನೆ…

Promotion

ಬೆಂಗಳೂರು,ಜು,16,2019(www.justkannada.in): ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ರೋಷನ್ ಬೇಗ್ ಅವರ  ಎಸ್ ಐಟಿ ವಿಚಾರಣೆ ಅಂತ್ಯವಾಗಿದ್ದು ನಿಗದಿಯಂತೆ ಮತ್ತೆ ಜುಲೈ 19 ಕ್ಕೆ ವಿಚಾರಣೆಗೆ ಹಾಜರಾಗುವಂತೆ  ಸೂಚನೆ ನೀಡಿದೆ.

ಐಎಂಎ ವಂಚನೆ ಪ್ರಕರಣದಲ್ಲಿ ಶಾಸಕ ಆರ್. ರೋಷನ್ ಬೇಗ್ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ ನಿನ್ನೆ ರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅವರನ್ನು ವಶಕ್ಕೆ ಪಡೆದಿತ್ತು.

ವಿಚಾರಣೆ ಬಳಿಕ ಮಾತನಾಡಿದ ರೋಷನ್ ಬೇಗ್, ಎಸ್‌ಐ ಟಿ ವಿಚಾರಣೆ ನಡೆಸಿದ್ದಾರೆ, ಸತತ 13 ಗಂಟೆ ವಿಚಾರಣೆ ನಡೆಸಿ ನನಗೆ ಕಳುಹಿಸಿದ್ದು, ಅವರಿಗೆ ಸಹಕಾರ ನೀಡುತ್ತೇನೆ ಎಂದು ಎಸ್ ಐಟಿ ಅಧಿಕಾರಿಗಳಿಗೆ ಹೇಳಿದ್ದೇನೆ. ನಾನು ಪುನಾಗೆ ಹೋಗುತ್ತಿದ್ದೇ. ಆದರೆ, ರಾಜಕೀಯ ಪಿತೂರಿಯಿಂದ ನನ್ನನ್ನು ಎಸ್ ಐಟಿ ವಶಕ್ಕೆ ಪಡೆದಿದ್ದರು ಎಂದರು.

ನಾನೇ ಬೇರೆ ದೇಶಕ್ಕೆ ಹೋಗುತ್ತಿದ್ದೇನೆ ಎಂದು ತಪ್ಪು ತಿಳಿದಿದ್ದರು. ನಾನು ಬೇರೆ ದೇಶಕ್ಕೆ ಹೋಗುವ ಉದ್ದೇಶವಿಲ್ಲ. ಜುಲೈ 19 ಕ್ಕೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು  ರೋಷನ್ ಬೇಗ್ ತಿಳಿಸಿದರು.

Key words: Former Minister -Roshan Beg – SIT – Inquiry-ends