ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಜೈಲೇ ಗತಿ:  ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ…

Promotion

ನವದೆಹಲಿ,1,2019(www.justkannada.in):  ಅಕ್ರಮ  ಹಣ ವರ್ಗಾವಣೆ ಪ್ರಕರಣದಡಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನ ಅಕ್ಟೋಬರ್ 15ರವರೆಗೆ ವಿಸ್ತರಿಸಿ ರೋಸ್ ಅವೆನ್ಯೂಕೋರ್ಟ್ ಆದೇಶ ಹೊರಡಿಸಿದೆ.

ಇಂದಿಗೆ  ಡಿ.ಕೆ ಶಿವಕುಮಾರ್ ಅವರ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾದ ಹಿನ್ನಲೆ ಇಂದು ಮತ್ತೆ  ನವದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಧೀಶರು ಡಿಕೆ ಶಿವಕುಮಾರ್  ಅವರ ನ್ಯಾಯಾಂಗ ಬಂಧನ ಅವಧಿಯನ್ನ ಅಕ್ಟೋಬರ್ 15ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದರು.

ಇನ್ನು ಅಕ್ಟೋಬರ್ 4 ಮತ್ತು 5 ರಂದು ಮಧ್ಯಾಹ್ನ 11ರಿಂದ 3 ಗಂಟೆವರಗೆ ಡಿ.ಕೆ ಶಿವಕುಮಾರ್ ವಿಚಾರಣೆ ನಡೆಸಲು ಇಡಿಗೆ ಕೋರ್ಟ್ ಅವಕಾಶ ನೀಡಿದೆ. ಹಾಗೆಯೇ ಸಂಜೆ 3 ರಿಂದ 5 ಗಂಟೆವರೆಗೆ ಡಿ.ಕೆ ಶಿವಕುಮಾರ್ ವಕೀಲರ ಭೇಟಿಗೆ ಅವಕಾಶ ನೀಡಿದೆ.

ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿಯನ್ನು ಇ.ಡಿ. ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು. ಹೀಗಾಗಿ ಡಿಕೆಶಿ ಅವರು ದೆಹಲಿಯ ಹೈಕೋರ್ಟ್ ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಅವರ ಜಾಮೀನು ಅರ್ಜಿ ವಿಚಾರಣೆ ಅಕ್ಟೋಬರ್.14ಕ್ಕೆ ನಡೆಯಲಿದೆ.

Key words: Former minister- DK Sivakumar – Extension – judicial custody