ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಜಾಮೀನು ಸಿಗಲೆಂದು ಮೈಸೂರಿನಲ್ಲಿ ಅಭಿಮಾನಿಗಳಿಂದ ವಿಶೇಷ ಪೂಜೆ…

Promotion

ಮೈಸೂರು,ಸೆ,25,2019(www.justkannada.in): ಅಕ್ರಮ ಹಣ ವರ್ಗಾವಣೆ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ಬಗ್ಗೆ ಇಂದು ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಆದೇಶ ಹೊರಡಿಸಲಿದೆ.

ಈ ನಡುವೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಜಾಮೀನು ಸಿಗಲೆಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ  ಡಿಕೆಶಿ ಅಭಿಮಾನಿಗಳು ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಂದು ಮಧ್ಯಾಹ್ನ 3.30ಕ್ಕೆ  ಇಡಿ ಕೋರ್ಟ್‌ನಲ್ಲಿ ಡಿಕೆಶಿ ಜಾಮೀನು ಅರ್ಜಿ ಬಗ್ಗೆ ಅದೇಶ ಹೊರ ಬೀಳಲಿದೆ. ಹೀಗಾಗಿ   ಇಂದಿನ ವಿಚಾರಣೆಯಲ್ಲಿ ಡಿಕೆಶಿವ ಕುಮಾರ್ ಅವರಿಗೆ  ಜಾಮೀನು ಸಿಗಲೆಂದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಚಾಮುಂಡೇಶ್ವರಿ ವಿಗ್ರಹಕ್ಕೆ  ವಿಶೇಷ ಪೂಜೆ‌ ಸಲ್ಲಿಸಿ ಪ್ರಾರ್ಥನೆ ಸಲ್ಲಿಕೆ‌ ಮಾಡಿದರು.

ಚಾಮುಂಡೇಶ್ವರಿ ದೇವಿಗೆ ಡಿಕೆಶಿ ಅಭಿಮಾನಿಗಳು ಘೋಷಣೆ ಕೂಗಿ ಜೈಕಾರ ಹಾಕಿದರು. ಡಿಕೆಶಿಗೆ ಒಳಿತಾಗಲೆಂದು ಈಡುಗಾಯಿ ಹೊಡೆದರು. ಕಾಂಗ್ರೆಸ್ ಮುಖಂಡ ಶ್ರೀನಾಥ್ ಬಾಬು ಮಾತನಾಡಿ, ಡಿ.ಕೆ ಶಿವಕುಮಾರ್ ಇಂದು  ಜಾಮೀನು ಪಡೆದು ಹೊರ ಬರ್ತಾರೆ. ಈ ನಾಡ ಹಬ್ಬದ ಸಂದರ್ಭದಲ್ಲಿ ಡಿಕೆಶಿ ಅವರನ್ನ ಕರೆಸಿ ವಿಶೇಷ ಪೂಜೆ ಮಾಡಿಸಲಿದ್ದೇವೆ ಎಂದರು.

Key words: Former minister- DK Sivakumar – bail –spacial worship-Mysore