ಉಪಚುನಾವಣೆಗೆ ತಡೆ ನೀಡಿ ಅಥವಾ ಸ್ಪರ್ಧೆಗೆ ಅವಕಾಶ ಕೊಡಿ-ಸುಪ್ರೀಂಕೋರ್ಟ್ ನಲ್ಲಿ ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ವಾದ ಮಂಡನೆ…

ನವದೆಹಲಿ,ಸೆ,25,2019(www.justkannada.in):  ಶಾಸಕರನ್ನ ಅನರ್ಹಗೊಳಿಸಿರುವ ಸ್ಪೀಕರ್ ಆದೇಶ ಪೂರ್ವಾಗ್ರಹ ಪೀಡಿತವಾದದ್ದು. ಶಾಸಕರು ಸ್ವ ಇಚ್ಛೆಯಿಂದ ರಾಜೀನಾಮೆ ಸಲ್ಲಿಸಿ ಸ್ಪರ್ಧಿಸುವ ಹಕ್ಕು ಇದೆ. ಹೀಗಾಗಿ ಪ್ರಕರಣ ಇತ್ಯರ್ಥವಾಗುವವರೆಗೂ ಉಪಚುನಾವಣೆಗೆ ತಡೆ ನೀಡಿ. ಅಥವಾ ಚುನಾವಣೆ ಮುಂದೂಡಿ. ಇಲ್ಲದಿದ್ದರೇ ಅನರ್ಹ ಶಾಸಕರ ಸ್ಪರ್ಧೆಗೆ ಅವಕಾಶ ನೀಡಿ ಎಂದು ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ಸುಪ್ರೀಂಕೋರ್ಟ್ ಗೆ ಮನವಿ ಮಾಡಿದರು.

ಸುಪ್ರೀಂಕೋರ್ಟ್ ನ  ತ್ರಿಸದಸ್ಯ ಪೀಠದಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ  ನಡೆಯುತ್ತಿದ್ದು ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ವಾದ ಮಂಡಿಸಿದ್ದಾರೆ.

ಸುಪ್ರೀಂಕೋರ್ಟ್ ನಲ್ಲಿ ವಕೀಲ ಮುಕುಲ್ ರೋಹ್ಟಗಿ ಮಂಡಿಸಿದ ವಾದವೇನು ಗೊತ್ತೆ ಇಲ್ಲಿದೆ ನೋಡಿ….

ಆನಂದ್ ಸಿಂಗ್ ರಾಜೀನಾಮೆ ಅಂಗೀಕರಿಸಲಿಲ್ಲ. ಬೋಷನ್ ಬೇಗ್ ಪ್ರಕರಣದಲ್ಲೂ ಹೀಗೆ ಮಾಡಿದ್ದಾರೆ. ಸ್ಪೀಕರ್ ದುರುದ್ದೇಶದಿಂದ ವಿಳಂಬ ಮಾಡಿದ್ದಾರೆ. ಎಲ್ಲರೂ ಸ್ವಪ್ರೇರಣೆಯಿಂದ ರಾಜೀನಾಮೆ ನೀಡಿಲ್ಲ. ಬೇರೆ ಬೇರೆ ಪ್ರಭಾವಕ್ಕೆ ಒಳಗಾಗಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದಿದ್ದಾರೆ.  ಸ್ಪೀಕರ್ ಖುದ್ದು ತಮಗೆ ರಾಜೀನಾಮೆ ಸಲ್ಲಿಸಬೇಕು ಎಂದು ರಾಗ ತೆಗೆದಿದ್ದರು. ಆದರೆ ನಂತರ ಸ್ಪೀಕರ್ ರಾಜೀನಾಮೆಯನ್ನು ಅಂಗೀಕರಿಸಲಿಲ್ಲ. ಶಾಸಕರ ರಾಜೀನಾಮೆ ಸ್ವಇಚ್ಚೇ ಮತ್ತು ನೈಜತೆಯಿಂದ  ಇದೆಯೇ ಎಂಬುದನ್ನ ಮಾತ್ರ ಸ್ಪೀಕರ್ ಗಮನಿಸಬೇಕು.

ಶಾಸಕರು ಸ್ಪೀಕರ್ ಗೆ ನೇರವಾಗಿ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ. ಉದ್ದೇಶ ಏನೇ ಇದ್ರೂ ರಾಜೀನಾಮೆ ಅಂಗೀಕರಿಸಬೇಕು.  ಶಾಸಕರಿಗೆ ಒತ್ತಡ ಇತ್ತು ಎಂದು ಸ್ಪೀಕರ್ ಹೇಳಿದ್ದಾರೆ. ಆದರೆ ಯಾವುದೇ ಒತ್ತಡ ಇರಲಿಲ್ಲ. ಸ್ವಇಚ್ಛೆಯಿಂದ ರಾಜೀನಾಮೆ ಕೊಟ್ಟಿದ್ದರೂ ಅಂಗೀಕರಿಸಿಲ್ಲ.

ಸಂವಿಧಾನದ ಆರ್ಟಿಕಲ್ 191/1 ಓದಿದ ಮುಕುಲ್ ರೋಹ್ಟಗಿ,  ಕೆಲವು ಕಾರಣಗಳಿಂದ ಅನರ್ಹ ಮಾಡಿದ್ರೆ ಸ್ಪರ್ಧೇಗೆ ಅವಕಾಶವಿಲ್ಲ. ಆದ್ರೆ ಎಲ್ಲಾ ಅನರ್ಹರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು. 191/1ರಡಿ  ಅನರ್ಹತೆ ಮಾಡಿದರೇ ಸ್ಪರ್ಧೆ ಬಗ್ಗೆ ಸ್ಪಷ್ಟತೆ ಇಲ್ಲ.

ಸಂವಿಧಾನದ 10ನೇ ಪರಿಚ್ಚೇದ ಉಲ್ಲೇಖಿಸಿದ ಮುಕುಲ್ ರೋಹ್ಟಗಿ ರಾಜೀನಾಮೆ ನೀಡಿದ್ದು ಕ್ರಮಬದ್ಧವಿದ್ದರೇ ರಾಜೀನಾಮೆ ಅಂಗೀಕರಿಸಬೇಕು. ಅನರ್ಹಗೊಳಿಸಲು ಸಾಧ್ಯವೇ ಇಲ್ಲ. ಜೈಲು ಸೇರಿದ್ರೆ ಮಾನಸಿಕ ಸ್ಥಿಮಿತ ಕಳೆದುಕೊಂಡರೇ ಅನರ್ಹಗೊಳಿಸಬಹುದು. ಸ್ವ ಇಚ್ಛೆಯಿಂದ ರಾಜೀನಾಮೆ ಸಲ್ಲಿಸಿ ಸ್ಪರ್ಧಿಸುವ ಹಕ್ಕು ಇದೆ. ಹಾಗೆಯೇ ಅನರ್ಹತೆ ಮಾಡಿದ್ರೂ ಸ್ಪರ್ಧೆಗೆ ಅವಕಾಶವಿದೆ.  ಪ್ರಕರಣ ಇತ್ಯಾರ್ಥವಾಗುವವರೆಗೂ ಘೋಷಣೆಯಾಗಿರುವ ಚುನಾವಣೆಗೆ ತಡೆ ನೀಡಬೇಕು.

ರಾಜೀನಾಮೆ ನೀಡಿದ ಶಾಸಕರು ಮರು ಆಯ್ಕೆಯಾಗಲು ಅವಕಾಶವಿದೆ. ನಾಮಪತ್ರ ಸಲ್ಲಿಸಲು ಕೇವಲ 5 ದಿನ ಮಾತ್ರ ಬಾಕಿ ಇದೆ. ಹೀಗಾಗಿ ಚುನಾವಣೆಗೆ ತಡೆ ನೀಡಬೇಕು ಎಂಬುದು ನಮ್ಮ ಮೊದಲ ಪ್ರಾರ್ಥನೆ.

ರಾಜೀನಾಮೆ ನೈಜವಾಗಿಲ್ಲ ಎಂಬುವುದಕ್ಕೆ ಯಾವುದೇ ಸಾಕ್ಷಿ ಇಲ್ಲ. ಸಾಕ್ಷಿಗಳೇ ಇಲ್ಲದೆ ಅನರ್ಹ ಮಾಡಲಾಗಿದೆ. ಸ್ಪೀಕರ್ ಆದೇಶ ಪೂರ್ವಾಗ್ರಹ ಪೀಡಿತದಿಂದ ಕೂಡಿದೆ. ಹೀಗಾಗಿ ಉಪ ಚುನಾವಣೆ ಅಧಿಸೂಚನೆ 2 ಮೂರು ತಿಂಗಳು ಮುಂದೂಡಿ, ಮುಂದೂಡಿ, ಅಥವಾ ತಡೆ ನೀಡಿ, ಅಥವಾ ಸ್ಪರ್ಧೆಗೆ ಅವಕಾಶ ಕೊಡಿ.  ಅವರು ಎಲ್ಲಿ ರಾಜೀನಾಮೆ ನೀಡಿದ್ದಾರೆ ಎಂಬುದು ಮುಖ್ಯವಲ್ಲ. ನಿಯಮವನ್ನೇ ಮೀರಿ ಅನರ್ಹಗೊಳಿಸಿದ್ರೆ ಹೇಗೆ. ನಾವು ಕೇವಲ ಸ್ಪೀಕರ್ ಆದೇಶ ಪ್ರಶ್ನಿಸುತ್ತಿದ್ದೇವೆ. ಚುನಾವಣಾ ಅಧಿಸೂಚನೆಯನ್ನಲ್ಲ.

ರಾಜೀನಾಮೆ ವಾಪಸ್ ಪಡೆಯುವಂತೆ ಒತ್ತಡ ಹೇರಲಾಗಿದೆ. ರಾಜೀನಾಮೆ ವಾಪಸ್ ಪಡೆಯಲು ಒಪ್ಪದಿದ್ದಾಗ ಅನರ್ಹತೆ ಮಾಡಲಾಗಿದೆ. ವಿಮಾನದಲ್ಲಿ ಮುಂಬೈಗೆ ತೆರಳಿದ್ದಾರೆ ಎನ್ನುತ್ತಾರೆ ಸ್ಪೀಕರ್. ಇದು ಶಾಸಕರನ್ನ ಅನರ್ಹಗೊಳಿಸಲು ಕಾರಣವಲ್ಲ.  ಸ್ಪೀಕರ್ ಹೆಡ್ ಮಾಸ್ಟರ್ ಅಲ್ಲ. ಇದನೆಲ್ಲಾ ಯಾಕೆ ಕೇಳಬೇಕು. ಶಾಸಕರ ನಿರ್ಧಾರವನ್ನು ಸ್ಪೀಕರ್ ಪ್ರಶ್ನಿಸುವಂತಿಲ್ಲ.

Key words: Allow -by-election – contest-supreme court- disqualified MLA-Mukul Rohtagi