ಉದಯ ಟಿವಿ ‘ಚಿಣ್ಣರ ಚಿಲಿಪಿಲಿ’ಗೆ ಮಾಜಿ ಸಚಿವೆ, ನಟಿ ಉಮಾಶ್ರೀ ನಿರೂಪಕಿ

Promotion

ಬೆಂಗಳೂರು, ಡಿಸೆಂಬರ್ 17, 2019 (www.justkannada.in): ಮಾಜಿ ಸಚಿವೆ, ಹಿರಿಯ ನಟಿ ಉಮಾಶ್ರೀ ಅವರು ಇದೀಗ ನಿರೂಪಕಿಯಾಗುತ್ತಿದ್ದಾರೆ.

ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ ಜನಪ್ರಿಯ ಶೋ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮಕ್ಕೆ ಉಮಾಶ್ರೀ ನಿರೂಪಕಿಯಾಗುತ್ತಿದ್ದಾರೆ. ಈ ಮೊದಲು ಈ ಕಾರ್ಯಕ್ರಮವನ್ನು ಶಾಲಿನಿ ನಿರೂಪಿಸುತ್ತಿದ್ದರು.

ಈ ಬಾರಿ ಉಮಾಶ್ರೀ ಆ ಕೆಲಸ ಮಾಡಲಿದ್ದಾರೆ. ಅಂತೂ ಹಿರಿಯ ಕಲಾವಿದೆಗೆ ಇದು ಹೊಸ ಇನಿಂಗ್ಸ್ ಎಂದರೂ ತಪ್ಪಾಗಲಾರದು. ಸದ್ಯದಲ್ಲೇ ಶೋ ಆರಂಭವಾಗಲಿದೆ. ಈ ಮೂಲಕ ಉಮಾಶ್ರೀ ಹೊಸ ಸುದ್ದಿ ಕೊಟ್ಟಿದ್ದಾರೆ.