ಘಟನಾ ಸ್ಥಳ ಪರಿಶೀಲನೆ ವೇಳೆ ಪೊಲೀಸರಿಗೆ ಪಾಠ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ.

Promotion

ಮೈಸೂರು,ಸೆಪ್ಟಂಬರ್,1,2021(www.justkannada.in): ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪೊಲೀಸರಿಗೆ ಪಾಠ ಮಾಡಿದ ಪ್ರಸಂಗ ಕಂಡು ಬಂದಿತು.

ಘಟನೆ ನಡೆದ ಸ್ಥಳಕ್ಕೆ ಇಂದು ಭೇಟಿ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳಿಗೆ ಹಲವು ಪ್ರಶ್ನೆಗಳನ್ನ ಹಾಕಿದರು. ಸಿದ್ದರಾಮಯ್ಯ ಅವರ ಪ್ರಶ್ನೆಗಳಿಗೆ ಉತ್ತರಿಸಲು ಪೊಲೀಸರು ತಡಬಡಾಯಿಸಿದರು. ಇದೇ ವೇಳೆ   ಇನ್ಸ್ ಪೆಕ್ಟರ್ ರವಿಶಂಕರ್  ಗೆ ಕ್ಲಾಸ್ ತೆಗೆದುಕೊಂಡ ಸಿದ್ಧರಾಮಯ್ಯ, ನೀನು ಎಷ್ಟು ತಿಂಗಳಾಯ್ತಯ್ಯ ಬಂದು. ಘಟನೆ ನಡೆದ ಸ್ಥಳ ಯಾರಿಗೆ ಸೇರುತ್ತೆ. ಇಲ್ಲಿಂದ ರಿಂಗ್ ರಸ್ತೆ ಎಷ್ಟು ದೂರು ಬರುತ್ತೆ ಹೇಳು ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಅವರ  ಪ್ರಶ್ನೆಗೆ ಇನ್ಸ್ ಪೆಕ್ಟರ್ ರವಿಶಂಕರ್  ಹಿರಿಯ ಅಧಿಕಾರಿಗಳ ಮುಖ ನೋಡಿದರು. ಈ ವೇಳೆ ಅವರ ಮುಖ ಏನು ನೋಡುತ್ತಿ, ಹೇಳು ಎಂದರು ಮಾಜಿ ಸಿಎಂ ಸಿದ್ದರಾಮಯ್ಯ.

ಹಾಗೆಯೇ ಮುಂದುವರೆದು ಅಬ್ಯೂಚುಯಲ್ ಅಫೆಂಡರ್ಸ್ ಅಂದ್ರೆ ಗೊತ್ತೇನಯ್ಯ ಎಂದು ಐಓ ರವಿಶಂಕರ್ ಗೆ ಸಿದ್ದರಾಮಯ್ಯ ಪ್ರಶ್ನಿಸಿದರು. ಉತ್ತರ ಹೇಳದಿದ್ದಾಗ ತಾವೇ ಉತ್ತರಿಸಿದ ಸಿದ್ಧರಾಮಯ್ಯ, ಆಂಗಂದ್ರೆ ಪದೇ ಪದೇ ತಪ್ಪು ಮಾಡುವವರು ಅಂತ. ಅವರು ಮೈಸೂರಲ್ಲಿ ಹಿಂದೆ ತಪ್ಪು ಮಾಡಿದ್ರಾ..? ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಪ್ರಶ್ನೆಗೆ ಮಧ್ಯ ಪ್ರವೇಶ ಮಾಡಿ ಉತ್ತರ ಕೊಟ್ಟ ಡಿಸಿಪಿ ಪ್ರದೀಪ್ ಗುಂಟಿ, ಅವರಲ್ಲಿ ಒಬ್ಬ ಗಂಧದ ಕಳ್ಳ. ಕೇಸ್ ಆಗಿಲ್ವ ಎಂಬ  ಸಿದ್ದರಾಮಯ್ಯ ಪ್ರಶ್ನೆಗೆ ಇಲ್ಲ ಸರ್ ಕೇಸ್ ಆಗಿತ್ತು ಎಂದು ಡಿಸಿಪಿ ಪ್ರದೀಪ್ ಗುಂಟಿ ಉತ್ತರಿಸಿದರು. ಜಾಮೀನು ಮೇಲೆ ಬಂದಿದ್ರಾ ಎಂದ ಸಿದ್ದರಾಮಯ್ಯ ನಂತರ ಪೊಲೀಸರಿಗೆ ಪಾಠ ಮಾಡಿದರು.

ಇನ್ಸ್ ಪೆಕ್ಟರ್ ರವಿಶಂಕರ್ ಗೆ ಫುಲ್ ಕ್ಲಾಸ್ ತೆಗೆದುಕೊಂಡ ಸಿದ್ದರಾಮಯ್ಯ, ಇಲ್ಲಿ ಹುಡುಗ ಹುಡುಗಿ ಬರುತ್ತಾರೆ ಅಂತ ಗೊತ್ತೇನೆಯ್ಯ.ನೀನು ಎಷ್ಟು ಸಾರಿ ಇಲ್ಲಿಗೆ ಬಂದು ಪರಿಶೀಲಿಸಿದ್ದಿಯಾ. ಗರುಡಾ ವಾಹನ ಇಲ್ಲಿಗೆ ಬರುತ್ತವಾ..?  ಇಲ್ಲಿಂದ ರಿಂಗ್ ರಸ್ತೆಗೆ ಎಷ್ಟು ಕಿಲೋಮೀಟರ್. ಒಂದುವರೆ ಕಿಲೋಮೀಟರ.? ಇನ್ನ ಅದೆಲ್ಲ ಅಳತೆ ಮಾಡಿಲ್ವಯ್ಯ. ಕೋರ್ಟ್‌ನಲ್ಲಿ ಕೇಳಿದ್ರೆ ಏನ್ ಹೇಳ್ತಿಯಯ್ಯ. ಇದೆಲ್ಲ ರೆಡಿ ಮಾಡಿಕೊಳ್ಳಬೇಕಲ್ವ ಎಂದು ತರಾಟೆ ತೆಗೆದುಕೊಂಡರು. ಬಳಿಕ ನೀವೆಲ್ಲ ಹೇಳಿಕೊಟ್ಟಿಲ್ವಯ್ಯ ಎಂದು ಡಿಸಿಪಿಗೆ ಪ್ರಶ್ನಿಸಿದರು.

Key words: Former CM –Siddaramaiah-taught –police-mysore- inspection.