ಕಾಂಗ್ರೆಸ್ ಪಾಕಿಸ್ತಾನದಲ್ಲಿ ಸರ್ವೆ ಮಾಡಿಸಿತ್ತಾ ಎಂಬ ಶಾಸಕ ಸಿ.ಟಿ ರವಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ತಿರುಗೇಟು.

Promotion

ಬೆಂಗಳೂರು,ಫೆಬ್ರವರಿ,4,2023(www.justkannada.in):  ನಾವು ಸರ್ವೇ ಮಾಡಿಸಿದ್ದೇವೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಟಾಂಗ್ ನೀಡಿ ಕಾಂಗ್ರೆಸ್ ಪಾಕಿಸ್ತಾನದಲ್ಲಿ ಸರ್ವೆ ಮಾಡಿಸಿತ್ತಾ ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಿದ್ಧರಾಮಯ್ಯ, ಸಿಟಿ ರವಿ ಸುಳ್ಳು ಹೇಳುವ ರಾಜಕಾರಣಿ. ಸಿಟಿ ರವಿ ಪಕ್ಕಾ ಆರ್ ಎಸ್ ಎಸ್.  ‍ ಆರ್ ಎಸ್ ಎಸ್ ನವರು ಸುಳ್ಳು ಹೇಳೋದು ಜಾಸ್ತಿ. ಡಿಕೆ ಶಿವಕುಮಾರ್ ಸರ್ವೆ ಮಾಡಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದಲೂ ಸರ್ವೆ ಮಾಡಲಾಗಿದೆ. ರಾಜ್ಯದಲ್ಲಿ ನಿಶ್ಚಿತವಾಗಿ ಕಾಂಗ್ರೆಸ್ ಗೆ ಜಯ ಸಿಗಲಿದೆ ಎಂದರು.

ನಿನ್ನೆ ಹೆಚ್.ಡಿ ಕುಮಾರಸ್ವಾಮಿ ಕಣ್ಣೀರು ಹಾಕಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ದೇವೇಗೌಡರು ಕುಮಾರಸ್ವಾಮಿ ಕಣ್ಣೀರು ಹಾಕ್ತಾರೆ. ಏಕೆ ಕಣ್ಣೀರು ಹಾಕುತ್ತಾರೆ. ಅಂತಾ ಜನರಿಗೆ ಗೊತ್ತು. ಕಷ್ಟ ಬಂದಾಗ ಕಣ್ಣೀರು  ಹಾಕ್ತಾರೆ ಎಂದು ಲೇವಡಿ ಮಾಡಿದರು.

Key words: Former CM -Siddaramaiah – MLA -CT Ravi – survey