ಮಾಜಿ ಸಚಿವ ಎ. ಮಂಜು ಜೊತೆ ಮಾತನಾಡಿದ್ದೇನೆ: ಜೆಡಿಎಸ್ ಪಕ್ಷಕ್ಕೆ ಬರಬಹುದು- ಹೆಚ್.ಡಿ ಕುಮಾರಸ್ವಾಮಿ.

ಬೆಂಗಳೂರು,ಫೆಬ್ರವರಿ,4,2023(www.justkannada.in): ಅರಕಲಗೂಡು ಶಾಸಕ ಎ.ಟಿ ರಾಮಸ್ವಾಮಿ ಹಾಗೂ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಈಗಾಗಲೇ ಜೆಡಿಎಸ್ ಪಕ್ಷದಿಂದ ದೂರ ಉಳಿದಿದ್ದು ಈ ನಡುವೆ ಮಾಜಿ ಸಚಿವ ಎ.ಮಂಜು ಅವರನ್ನ ಜೆಡಿಎಸ್ ಗೆ ಕರೆತರುವ ಪ್ರಯತ್ನದಲ್ಲಿ ಮಾಜಿ ಸಿಎಂ  ಹೆಚ್.ಡಿ ಕುಮಾರಸ್ವಾಮಿ ಇದ್ದಾರೆ.

ಈ ಕುರಿತು ಜೆಡಿಎಸ್ ಕಚೇರಿಯಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಶಿವಲಿಂಗೇಗೌಡರು ಮತ್ತು  ಎಟಿ ರಾಮಸ್ವಾಮಿ ನಮ್ಮ ಪಕ್ಷದ ಸಭೆಗೆ ಬಂದಿಲ್ಲ ನಮ್ಮ ಪಕ್ಷದಿಂದ ದೂರ ಉಳಿದಿದ್ದಾರೆ. ಈಗಾಗಲೇ ಎ.ಮಂಜು ಅವರ ಜೊತೆ ಮಾತನಾಡಿದ್ದೇನೆ.  ಜೆಡಿಎಸ್ ಪಕ್ಷಕ್ಕೆ ಬರಬಹುದು. ಅರಸೀಕೆರೆ  ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಕೊರತೆ ಇಲ್ಲ ಎಂದಿದ್ದಾರೆ.

ಗೊಂದಲ ಇಲ್ಲದೇ ಟಿಕೆಟ್ ಫೈನಲ್ ಮಾಡುತ್ತೇವೆ.  ಎ.ಮಂಜು ಜತೆ ಮಾತನಾಡಿ ಟಿಕೆಟ್ ಫೈನಲ್ ಮಾಡಿದ್ದೇನೆ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

Key words: Former Minister -A. Manju- JDS- HD Kumaraswamy.