ಸಿದ್ದರಾಮಯ್ಯರನ್ನ ಟಾರ್ಗೆಟ್ ಮಾಡುವ ಪ್ರಶ್ನೆಯೇ ಇಲ್ಲ ಎಂದ ಸಚಿವ ಗೋವಿಂದ ಕಾರಜೋಳ.

Promotion

ಬಾಗಲಕೋಟೆ, ಸೆಪ್ಟಂಬರ್,24,2022(www.justkannada.in): ಸಿದ್ಧರಾಮೋತ್ಸವದ ಬಳಿಕ ಬಿಜೆಪಿಗೆ ಭಯ ಶುರುವಾಗಿದೆ ಎಂಬ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿಕೆಗೆ ಸಚಿವ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ.

ಬಾಗಲಕೋಟೆಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಗೋವಿಂದ ಕಾರಜೋಳ, ಸಿದ್ದರಾಮಯ್ಯನಂಥವರು 100 ಜನ ಬಂದ್ರೂ ಭಯ ಪಡುವುದಿಲ್ಲ. ಇಡೀ ವಿಶ್ವದಲ್ಲಿ ಬಿಜೆಪಿ ಬಹುದೊಡ್ಡ ರಾಜಕೀಯ ಪಕ್ಷ.  ಭಾರತದಲ್ಲಿ 10 ಕೋಟಿಗೂ ಹೆಚ್ಚು ಸದಸ್ಯರನ್ನ ಹೊಂದಿದೆ.  ನಾವು ಒಬ್ಬರೇ ಶಾಸಕರಾಗಿದ್ದಗಲೂ ಭಯವಿರಲಿಲ್ಲ  ಸಿದ್ದರಾಮಯ್ಯರನ್ನ ಟಾರ್ಗೆಟ್ ಮಾಡುವ ಪ್ರಶ್ನೆಯೇ ಇಲ್ಲ ಎಂದರು.

ಸಿದ್ಧರಾಮಯ್ಯ 30 ರಿಂದ  40 ವರ್ಷ ರಾಜಕೀಯ ಮಾಡಿದರೂ  ಮೈಸೂರಿನ ಜನ ಸೋಲಿಸಿದರು. ಪ್ರತಿಯೊಬ್ಬರ ವ್ಯಕ್ತಿತ್ವವನ್ನ  ಜನರು ಅಳೆದು ತೂಗಿ ನೋಡ್ತಾರೆ ಎಂದು ಕಾಂಗ್ರೆಸ್ ಗೆ ಟಾಂಗ್ ನೀಡಿದರು.

Key words: former CM- Siddaramaiah-minister-Govinda karjol