ವರುಣ ಕ್ಷೇತ್ರದ ‘ಕೈ’ ಕಾರ್ಯಕರ್ತರ ಜತೆ  ಮತ್ತೆ ಸಭೆ ಮುಂದುವರೆಸಿದ ಮಾಜಿ ಸಿಎಂ ಸಿದ್ದರಾಮಯ್ಯ…

Promotion

ಮೈಸೂರು,ಜೂ,24,2019(www.justkannada.in):  ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಪುತ್ರ ಯತೀಂದ್ರ ಸಿದ್ಧರಾಮಯ್ಯ ಅವರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಜತೆ ಇಂದು ಸಹ ಸಭೆ ಮುಂದುವರೆಸಿದ್ದಾರೆ.

ನಗರದ ಖಾಸಗಿ ಹೋಟೆಲ್ ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ  ಮತ್ತೆ ಸಭೆ ಮುಂದುವರೆಸಿದ್ದಾರೆ. ನೆನ್ನೆ ಸಹ ಮಾಧ್ಯಮಗಳನ್ನು ದೂರ ಇಟ್ಟು  ಸಿದ್ದರಾಮಯ್ಯ ವರುಣ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಜತೆ ಸಭೆ ನಡೆಸಿ ಚರ್ಚೆ ನಡೆಸಿದ್ದರು. ಇದೀಗ ಇಂದು ಸಹ ಮಾತುಕತೆ ಮುಂದುವರಿಸಿದ್ದಾರೆ.

ಈ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸುವ ಕ್ಷೇತ್ರದತ್ತ ಹೆಚ್ಚು ಗಮನ ಹರಿಸುತ್ತಿದ್ದು ಯತೀಂದ್ರ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯದ ದೃಷ್ಠಿಯಿಂದ ಸಭೆಗಳನ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇನ್ನು ಲೋಕಸಭೆ ಚುನಾವಣೆಯಲ್ಲಿ ಸೋಲು ಹಿನ್ನೆಲೆ ಈ ಬಗ್ಗೆಯೂ ಸಭೆಯಲ್ಲಿ  ಚರ್ಚೆ ಮಾಡಲಾಗುತ್ತಿದೆ ಎನ್ನಲಾಗಿದೆ.

Key words: Former CM Siddaramaiah –meeting- Varuna-congress – activist