ಪ್ರಧಾನಿ ಮೋದಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ಪತ್ರ: ಕಾರಣ…?

Promotion

ಬೆಂಗಳೂರು,ಆ,27,2020(www.justkannada.in):   ರಾಜ್ಯ ಸರ್ಕಾರದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಮಾಜಿ ಸಿಎಂ ಸಿದ್ಧರಾಮಯ್ಯ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.jk-logo-justkannada-logo

 ಕರ್ನಾಟಕದಲ್ಲಿ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ  ತರಲು ಮುಂದಾಗಿದೆ. ಇದು ರೈತ ವರ್ಗಕ್ಕೆ ದುಷ್ಪರಿಣಾಮ ಬೀರಲಿದೆ. ಮೂಲಕ ಕರ್ನಾಟಕದಲ್ಲಿ ರೈತರ ಹಕ್ಕುಗಳನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಭೂಸುಧಾರಣಾ  ಕಾಯ್ದೆ ತಿದ್ದುಪಡಿ ವಾಪಸ್ ಪಡೆಯುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ ಎಂದು ಪ್ರಧಾನಿ ಮೋದಿಗೆ ಪತ್ರದಲ್ಲಿ  ವಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ. former-cm-siddaramaiah-letter-pm-modi-reason

ಈ ಕಾಯ್ದೆ ತಿದ್ದುಪಡಿಯಿಂದಾಗಿ ಉಳ್ಳವರು ಭೂಮಿಯ ಒಡೆಯರಾಗುತ್ತಾರೆ. ರೈತರ ಕೃಷಿ ಭೂಮಿ ಬಂಡವಾಳ ಶಾಹಿಗಳ ಕೈಗೆ ಸೇರುತ್ತದೆ. ಇದು ಸರ್ಕಾರದ ತಪ್ಪು ನಿರ್ಧಾರ. ಕೈಗಾರಿಕಾ ಅಭಿವೃದ್ಧಿಗೆ ಕೆಐಡಿಬಿ  ಬಳಿ 36 ಸಾವಿರ ಎಕರೆ ಭೂಮಿ ಇದೆ. ಹೀಗಾಗಿ ಭೂಸುಧಾರಣಾ ಕಾಯ್ದೆ ತಿದ್ದುಪಡಿಯನ್ನ ವಾಪಸ್ ಪಡೆಯುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ ಎಂದು ಸಿದ್ಧರಾಮಯ್ಯ ಪತ್ರದಲ್ಲಿ ಒತ್ತಾಯಿಸಿದ್ದಾರೆ.

Key words: Former CM –Siddaramaiah- letter -PM Modi- Reason