ಚಿಕ್ಕಮಗಳೂರಿನಲ್ಲಿ ಮುಂಜಾನೆ  ಮಾಜಿ ಸಿಎಂ ಸಿದ್ಧರಾಮಯ್ಯ ಬಿಂದಾಸ್ ವಾಕಿಂಗ್…

Promotion

ಚಿಕ್ಕಮಕಳೂರು,ಜ,31,2020(www.justkannada.in):  ಚಿಕ್ಕಮಗಳೂರು ಹೊರವಲಯದಲ್ಲಿರುವ ಸಿರಿ ರೆಸಾರ್ಟ್ ನಲ್ಲಿ ತಂಗಿರುವ ಮಾಜಿ ಸಿಎಂ ಸಿದ್ಧರಾಮಯ್ಯ ಇಂದು ಮುಂಜಾನೆಯೇ ಬಿಂದಾಸ್ ವಾಕಿಂಗ್ ಮಾಢಿದರು.

ಟೀ ಶರ್ಟ್, ಟ್ರಾಕ್ ತೊಟ್ಟು ಮಾಜಿ ಸಿಎಂ ಸಿದ್ಧರಾಮಯ್ಯ ಇಂದು ಮುಂಜಾನೆ ಯುವಕನಂತೆ   ವಾಕ್ ಮಾಡಿದ್ದಾರೆ. ವೈದ್ಯರ ಸಲಹೆಯಂತೆ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿರುವ ಸಿದ್ದರಾಮಯ್ಯ ಹೀಗಾಗಿ ಪ್ರತಿನಿತ್ಯ ವಾಕ್ ಮಾಡುತ್ತಿದ್ದಾರೆ. ಸರಳ ಯೋಗಾಸನದತ್ತಲೂ  ಸಿದ್ದರಾಮಯ್ಯ ಆಕರ್ಷಿತರಾಗಿದ್ದಾರೆ.

ಮುಂಜಾನೆಯೇ ವಾಕ್ ಮಾಡಿದ ಸಿದ್ದರಾಮಯ್ಯರನ್ನ ನೋಡಿ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡರು.

Key words: Former CM –Siddaramaiah- Bindas walking – Chikmagalur- early morning.