ಪತ್ರಕರ್ತರಿಗೆ ಪತ್ರಿಕಾ ದಿನಾಚಾರಣೆಯ ಶುಭ ಕೋರಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

Promotion

ಬೆಂಗಳೂರು,ಜುಲೈ,1,2021(www.justkannada.in): ಇಂದ ಪತ್ರಿಕಾ ದಿನಾಚಾರಣೆ ಹಿನ್ನೆಲೆ ಪತ್ರಕರ್ತರಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟ್ವಿಟ್ ಮಾಡಿ ಶುಭಕೋರಿದ್ಧಾರೆ.

ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಪತ್ರಕರ್ತ ಮಿತ್ರರೆಲ್ಲರಿಗೂ ಪತ್ರಿಕಾ ದಿನಾಚರಣೆಯ ಶುಭಾಶಯಗಳು. ಕೋವಿಡ್ – 19 ಮೊದಲನೇ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿಯೂ ” ಜನ ಮತ್ತು ಸಮಾಜದ ” ಹಿತಕ್ಕಾಗಿ ತಮ್ಮ ಜೀವದ ಹಂಗು ತೊರೆದು ಕರ್ತವ್ಯ ನಿರ್ವಾಹಿಸಿದ ನಿಮ್ಮ ಕಾಳಜಿ ಮತ್ತು ಬದ್ದತೆಗೆ ಬೆಲೆಕಟ್ಟಲು ಸಾಲದು ಎಂದು ಸ್ಮರಿಸಿದ್ದಾರೆ.

ಇಂತಹ ಕಷ್ಟಕಾಲದಲ್ಲೂ ವೃತ್ತಿಪರತೆಯನ್ನು ಎತ್ತಿಹಿಡಿದ ಪತ್ರಕರ್ತರಿಗೆ ನನ್ನ ಕೋಟಿ ಕೋಟಿ ನಮನಗಳು. ಜನರಲ್ಲಿ ತಾವು ಮೂಡಿಸಿದ ಜಾಗೃತಿ, ಅರಿವಿನ ಪರಿಣಾಮ ರಾಜ್ಯದಲ್ಲಿ ಇಂದು ಕೊವಿಡ್ ಸೋಂಕು ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದ್ದು ಕರ್ನಾಟಕ ” ಕೊರೊನಾ ಮುಕ್ತ ” ದತ್ತ ದಾಪುಗಾಲುಟ್ಟಿದೆ.

ಕೊರೊನಾ ಸಹಜ ಸ್ಥಿತಿಗೆ ಬರುತ್ತಿರುವುದರಲ್ಲಿ ಮಾಧ್ಯಮ ಮತ್ತು ಪತ್ರಕರ್ತರ ಅಸಾಧಾರಣ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ವರ್ತಮಾನದ ದಿನಗಳಲ್ಲಿ ಸತ್ಯಶೋಧಿಸುವ, ಧೈರ್ಯದಿಂದ ಅಭಿವ್ಯಕ್ತಿಸುವ ಮಾಧ್ಯಮದ ಶಕ್ತಿ ಪ್ರಜ್ವಲವಾಗಿ ಬೆಳಗಲಿ. ನನ್ನ ಸಮಸ್ತ ಪತ್ರಕರ್ತ ಮಿತ್ರರಿಗೆ ಪತ್ರಿಕಾ ದಿನಾಚರಣೆಯ ಶುಭಾಶಯಗಳು ಎಂದು ಹೆಚ್.ಡಿಕೆ ಶುಭಕೋರಿದ್ದಾರೆ.

ENGLISH SUMMARY…

Former CM H.D. Kumaraswamy wishes journos on ‘Patrika Dinacharane’
Bengaluru, July 1, 2021 (www.justkannada.in): Former Chief Minister H.D. Kumaraswamy has wished all the journalists of the State on the occasion of ‘Patrika Dinacharane’ (Kannada Press Day).
In his tweet, the former CM has wished all the journalists. “Journalists are among those who are working to give us news by pledging their lives even during the COVID-19 Pandemic time. I salute their concern and commitment towards their jobs and wish them all the best,” his tweet read.
“We are slowly coming out of the COVID-19 pandemic, and the role of media and journalists in bringing the pandemic under control is commendable. We shouldn’t forget their service. I wish to salute the efforts of the media in bringing the truth and facts before the people and wish fearless journalism may prevail in the current scenario. I once again extend my warm greetings to all my journalist friends on the occasion of the ‘Patrika Dinacharane.’
Keywords: ‘Patrika Dinacharane’/ Former CM/ H.D. Kumaraswamy/ wishes journalists

Key words: Former CM- HD Kumaraswamy- wishes-journalists – press day. .