ನಾಳೆ ಗೋಲ್ಡನ್ ಸ್ಟಾರ್ ಬರ್ತ್ ಡೇಗೆ ‘ತ್ರಿಬಲ್ ರೈಡಿಂಗ್’ ಟೀಸರ್ ರಿಲೀಸ್

ಬೆಂಗಳೂರು, ಜುಲೈ 01, 2021 (www.justkannada.in): ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬದ ಅಂಗವಾಗಿ ನಾಳೆ (ಜುಲೈ 2ಕ್ಕೆ) ತ್ರಿಬಲ್ ರೈಡಿಂಗ್ ಚಿತ್ರದ ಟೀಸರ್ ರಿಲೀಸ್ ಆಗಲಿದೆ.

ಮಹೇಶ್ ಗೌಡ ನಿರ್ದೇಶನದ ಕಾಮಿಡಿ ಸಿನಿಮಾದಲ್ಲಿ ಗಣೇಶ್ ಗೆ ನಾಯಕಿಯರಾಗಿ ಮೇಘಾ ಶೆಟ್ಟಿ, ರಚನಾ ಇಂದರ್ ಮತ್ತು ಅದಿತಿ ಪ್ರಭುದೇವ ನಟಿಸಿದ್ದಾರೆ.

ಚಿತ್ರದ ಮೂರು ಹಾಡುಗಳ ಚಿತ್ರೀಕರಣ ಬಾಕಿಯಿದೆ. ಇದರ ಜೊತೆಗೆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೂಡ ಆರಂಭವಾಗಲಿವೆ.

ಹಾಡುಗಳ ಶೂಟಿಂಗ್ ಗಾಗಿ ಇನ್ನೂ ಲೋಕೇಶನ್ ಫೈನಲ್ ಮಾಡಿಲ್ಲ ಎಂದು ನಿರ್ದೇಶಕ ಮಹೇಶ್ ಗೌಡ ತಿಳಿಸಿದ್ದಾರೆ. ಜುಲೈ 10 ರಿಂದ ಡಬ್ಬಿಂಗ್ ಮಾಡಲು ನಿರ್ದೇಶಕರು ತಯಾರಿ ನಡೆಸಿದ್ದಾರೆ.