ಜನತಾ ಜಲಧಾರೆ ಕಾರ್ಯಕ್ರಮ ಆರಂಭವಾದ ದಿನದಿಂದ ಈವರೆಗೆ ಉತ್ತಮ ಮಳೆ,ಇದು ಶುಭ ಸೂಚಕ- ಮಾಜಿ ಸಿಎಂ ಹೆಚ್.ಡಿಕೆ.

Promotion

ಮೈಸೂರು,ಮೇ,13,2022(www.justkannada.in): ಜನತಾ ಜಲಧಾರೆ ಕಾರ್ಯಕ್ರಮ ಆರಂಭವಾದ ದಿನದಿಂದ ಈವರೆಗೆ ಉತ್ತಮ ಮಳೆಯಾಗುತ್ತಿದೆ. ಇದು ಶುಭ ಸೂಚಕ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನುಡಿದರು.

ಇಂದು ಬೆಂಗಳೂರಿನಲ್ಲಿ ಜಲಧಾರೆ ಕಾರ್ಯಕ್ರಮ ಹಿನ್ನೆಲೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಮಳೆಯ ನಡುವೆಯೂ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು.  ಜಲಧಾರೆ ಕಾರ್ಯಕ್ರಮ ಯಶಸ್ವಿಯಾಗಲೆಂದು ದೇವರ ಬಳಿ ಪ್ರಾರ್ಥನೆ ಮಾಡಿದರು.

ಹೆಚ್.ಡಿ ಕುಮಾರಸ್ವಾಮಿಗೆ ಶಾಸಕ ಸಾರಾ ಮಹೇಶ್, ಮಂಜೇಗೌಡ ಹಾಗೂ ಸ್ಥಳೀಯ ಕಾರ್ಯಕರ್ತರು ಸಾಥ್ ನೀಡಿದರು. ಈ ವೇಳೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಬೆಂಗಳೂರಿನಲ್ಲಿ ಇಂದು ನಡೆಯುವ ಜನತಾ ಜಲಧಾರೆ ಕಾರ್ಯಕ್ರಮ ಯಶಸ್ವಿ ಆಗಲೆಂದು ತಾಯಿ ಚಾಮುಂಡೇಶ್ವರಿ ಬಳಿ ಬೇಡಿದ್ದೇನೆ. ತಾಯಿ ಅನುಗ್ರಹದಿಂದ ಸಮಾವೇಶ ಯಶಸ್ವಿ ಆಗುತ್ತೆ. ನಮ್ಮ ಜೆಡಿಎಸ್ ಪಕ್ಷದ ಜನತಾ ಜಲಧಾರೆ ವಾಹನದ ಮೂಲಕ ನಾಡಿನ ನೀರಾವರಿ ಯೋಜನೆ ಹಾಗೂ ಜೆಡಿಎಸ್ ಪಕ್ಷದ ನೀರಾವರಿ ಯೋಜನೆಗಳ ಕನಸ್ಸನ್ನು ರಾಜ್ಯಾದ್ಯಂತ ಜನತೆಗೆ ತಿಳಿಸಲಾಗಿದೆ. ಜನತಾ ಜಲಧಾರೆ ಕಾರ್ಯಕ್ರಮ ಆರಂಭವಾದ ದಿನದಿಂದ ಈ ತನಕ ನಿರಂತರವಾಗಿ ಉತ್ತಮ ಮಳೆಯಾಗುತ್ತಿದೆ. ಇದು ಶುಭ ಸೂಚಕ ಎಂದರು.

ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಪ್ರಕಟಿಸಬೇಕಷ್ಟೆ ಈ ಬಗ್ಗೆ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರೊಡನೆ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಈಗಾಗಲೇ ನಮ್ಮ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಚುನಾವಣಾ ಕೆಲಸ ಆರಂಭಿಸಿದ್ದಾರೆ. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು ಹೆಚ್.ಡಿಕೆ ತಿಳಿಸಿದರು.

Key words: former CM-HD Kumaraswamy-visit-mysore-chamundeshwari hills

ENGLISH SUMMARY….

The State is witnessing good rainfall since the beginning of Janatha Jaladhare Program, It’s a good omen – Former CM HDK
Mysuru, May 13, 2022 (www.justkannada.in): Former Chief Minister H.D. Kumaraswamy today observed that the State is witnessing good rainfall since the beginning of the ‘Janatha Jaladhare’ program by the JDS party.
He visited the Chamundi hills in Mysuru today to have the darshan of goddess Chamundeshwari and seek blessings for the success of the ‘Janatha Jaladhare’ program.
MLA Sa. Ra. Mahesh, Manjegowda, and other local activists accompanied him. Speaking on the occasion, the former CM informed that he prayed to the goddess Chamundeshwari for the success of the ‘Janatha Jaladhare’ program that is held at Bengaluru today. “The program will become successful from the blessings of the goddess. We are creating awareness among the people about the various irrigation projects and the JDS party’s pledge to implement all the dream irrigation projects of the party. The State is also witnessing good rainfall since we commenced the program, which is a good omen,” he said.
In his reply to a question, he said, “We are yet to officially announce the names of the candidates for the election. We will decide this after discussing it with the party supremo H.D. Devegowda. Already our party candidates have started the election work. A capable candidate will be fielded from the Chamundeshwari constituency in Mysuru.”
Keywords: Former CM H.D. Kumaraswamy/ Janatha Jaladhare/ successful/ good rains/ good omen