ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ  ಫೋನ್ ಕದ್ಧಾಲಿಕೆ ಮಾಡಿರೋದು ಮೇಲ್ನೋಟಕ್ಕೆ ದೃಢ- ಜಗದೀಶ್ ಶೆಟ್ಟರ್ ಹೇಳಿಕೆ…

Promotion

ಬೆಂಗಳೂರು,ಆ,19,2019(www.justkannada.in):  ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಪೋನ್ ಕದ್ದಾಲಿಕೆ ಮಾಡಿರೋದು ಮೇಲ್ನೋಟಕ್ಕೆ ದೃಢಪಟ್ಟಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ನುಡಿದಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಇಂದು ಮಾತನಾಡಿದ ಶಾಸಕ ಜಗದೀಶ್ ಶೆಟ್ಟರ್, ಟೆಲಿಗ್ರಾಫ್ ಕಾಯ್ದೆಯ ಅನುಸಾರ ಪೋನ್ ಕದ್ದಾಲಿಕೆ ಶಿಕ್ಷಾರ್ಹ ಅಪರಾಧ.  ಇಂತಹ ಪ್ರಕರಣವನ್ನು ರಾಜ್ಯ ಸರ್ಕಾರ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಿಬಿಐ ತನಿಖೆಗೆ ನೀಡಿದ್ದಾರೆ. ಸಿಬಿಐಗೆ ವಹಿಸಿರುವುದನ್ನ ನಾನು ಸ್ವಾಗತಿಸುತ್ತೇನೆ.  ಸಿಬಿಐ ತನಿಖೆಯ ಮೂಲಕ ಯಾರು ಯಾರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಸತ್ಯಾಸತ್ಯತೆ ಹೊರ ಬೀಳಲಿದೆ ಈ ಮೂಲಕ ಯಾರು ಯಾರು ಪ್ರಕರಣದ ಹಿಂದೆ ಇದ್ದಾರೆ ಎಂಬುದು ತಿಳಿದು ಬರಲಿ ಎಂದು ಹೇಳಿದರು.

ಹೆಚ್.ಡಿ ಕುಮಾರಸ್ವಾಮಿ ಸಿಎಂ ಆದ ಒಂದೇ ತಿಂಗಳಲ್ಲಿ ಡಿಸಿ ಸೇರಿ ಎಷ್ಟು ಜನರನ್ನ ವರ್ಗಾವಣೆ ಮಾಡಿದ್ದಾರೆ ಅಂತಾ ಗೊತ್ತಿದೆ. ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಾವಿರ ವರ್ಗಾವಣೆಯಾಗಿತ್ತು ಎಂಬುದು ಗೊತ್ತಿದೆ. ಈಗ ವರ್ಗಾವಣೆ ಬಗ್ಗೆ ಮಾತನಾಡಲು ಹೆಚ್.ಡಿ ಕುಮಾರಸ್ವಾಮಿ ಅವರಿಗೆ ನೈತಿಕತೆ ಇದೆಯಾ ಎಂದು ಪ್ರಶ್ನಿಸಿದರು.

Key words: Former CM HD Kumaraswamy –phone tapping-cbi -Jagadish Shettar.