ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ಕೊಪ್ಪಳ, ಜನವರಿ,30,2023(www.justkannada.in):  ಪಂಚರತ್ನ ಯೋಜನೆ ಜಾರಿಗೊಳಿಸದಿದ್ದರೇ 2028ಕ್ಕೆ ಜೆಡಿಎಸ್ ಪಕ್ಷ ವಿಸರ್ಜಿಸುತ್ತೇನೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತೆ ಅದೇ ಮಾತುಗಳನ್ನ ಪುನರುಚ್ಚರಿಸಿದ್ದಾರೆ.

ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ನಡೆದ ಪಂಚರತ್ನಯಾತ್ರೆಯಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ನಾನು ನೀಡಿದ ಭರವಸೆ ಈಡೇರಿಸಲು ಆಗದಿದ್ದರೇ ಜೆಡಿಎಸ್ ಪಕ್ಷವನ್ನೇ ವಿಸರ್ಜನೆ  ಮಾಡುತ್ತೇನೆ. ಮುಂದೆ ಎಂದಿಗೂ ಮತ ಕೇಳಲು ನಿಮ್ಮ ಬಳಿ ಬರಲ್ಲ. ನನ್ನ ಪರ ಜೈಕಾರ ಹಾಕ್ತಿರಿ.ಆದರೆ ಮತ ಹಾಕಲ್ಲ. ಇದರಲ್ಲಿ ನಮ್ಮದೂ ಕೂಡ ತಪ್ಪಿದೆ. ಅಭ್ಯರ್ಥಿ ಹಾಕೋದರಲ್ಲಿ ಎಡವಿದ್ದೇವೆ ಎಂದರು.

ಬಿಜೆಪಿಯವರು ಮೈತ್ರಿ ಸರ್ಕಾರ ತೆಗೆದರು. ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಅಂತ ಹೆಸರಿಟ್ಟರು. ನಾನು ಸಿಎಂ ಆಗಿದ್ದಾಗ ಮರುನಾಮಕರಣಕ್ಕೆ ಕಲಬುರುಗಿ ಶಾಸಕರೊಬ್ಬರು ಮನವಿ ಮಾಡಿದ್ದರು. ರೈತರ ಬಡವರ ಕಲ್ಯಾಣವಾದ ಬಳಿಕ ಹೆಸರಿಡಲು ಚಿಂತನೆ ನಡೆಸಲಾಗಿತ್ತು. ನಂತರ ಬಿಜೆಪಿ ಸರ್ಕಾರದವರು ಕಲ್ಯಾಣ ಕರ್ನಾಟಕ ಅಮತಾ ಹೆಸರಿಟ್ಟರು ಎಂದರು.

ಕನಕಗಿರಿ ಕ್ಷೇತ್ರದ  ಬಗ್ಗೆ ಕುಷ್ಟಗಿ ಸಮಾವೇಶ ವೇದಿಕೆಯಲ್ಲಿಅಸಮಾಧಾನ ವ್ಯಕ್ತಪಡಿಸಿದ ಹೆಚ್.ಡಿ ಕುಮಾರಸ್ವಾಮಿ, ತುಕರಾಮ್ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆದರೆ ಅಶೋಕ್( ಜೆಡಿಎಸ್ ನಿಯೋಜಿತ ಅಭ್ಯರ್ಥಿ)  ಕೆಲಸದ ಬಗ್ಗೆ ಸಮಾಧಾನವಿಲ್ಲ. ಅಶೋಕ್ ಕೆಲಸದ ಬಗ್ಗೆ ಅಸಮಾಧಾನವಿದೆ ಎಂದರು.

Key words: Former CM-H.D. Kumaraswamy –JDS- party-kustagi