ಬೇಸಿಗೆ ಬೆಂಕಿ ಎದುರಿಸಲು ಅರಣ್ಯ ಇಲಾಖೆ ಸಜ್ಜು: ಬಂಡಿಪುರ ಅರಣ್ಯ ವ್ಯಾಪ್ತಿಯಲ್ಲಿ ಫೈರ್ ಲೈನ್ ನಿರ್ಮಾಣ ಕಾರ್ಯ ಪೂರ್ಣ…

ಮೈಸೂರು,ಮಾ,1,2020(www.justkannada.in): ಬೇಸಿಗೆ ಬೆಂಕಿ ಎದುರುಸಲು ಅರಣ್ಯ ಇಲಾಖೆ ಸಜ್ಜಾಗಿದ್ದು ಈ ನಡುವೆ ಬಂಡಿಪುರ ಅರಣ್ಯ ವ್ಯಾಪ್ತಿಯಲ್ಲಿ ಫೈರ್ ಲೈನ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.

ಬಂಡೀಪುರ ಅರಣ್ಯ ವ್ಯಾಪ್ತಿಯ ಬಹುತೇಕ ಎಲ್ಲ ವಲಯಗಳಲ್ಲೂ ಫೈರ್ ಲೈನ್ ನಿರ್ಮಾಣ ಕಾರ್ಯ ಪೂರ್ಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಪೈರ್ ವಾಚರ್ ಹಾಗೂ ಸುಬ್ಬಂದಿಗೆ ಬೆಂಕಿ ಆರಿಸುವ ಕುರಿತು ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ

ಬೆಂಕಿ ಪಥ ನಿರ್ಮಿಸಿ ಬೆಂಕಿ ಬೇರೆಡೆಗೆ ಹರಡದಂತೆ ಅರಣ್ಯ ಇಲಾಖೆ ಎಚ್ಚರಿಕೆ ವಹಿಸಿದ್ದು, ಮಿನಿ ವಾಟರ್ ಟ್ಯಾಂಕ್, ವಾಟರ್ ಸ್ಪೇಯರ್ ಸೇರಿದಂತೆ ಇತರ ಸಾಮಾಗ್ರಿಗಳೊಂದಿಗೆ ಸಿಬ್ಬಂದಿಗಳು ಬೇಸಿಗೆ ಬೆಂಕಿ ಆರಿಸಲು ಸಿದ್ದರಾಗಿದ್ದಾರೆ.

ಒಂದು ವೇಳೆ ಕಾಡಲ್ಲಿ ಎಲ್ಲೇ ಆಕಸ್ಮಿಕ ಬೆಂಕಿ ತಗುಲಿದರೂ ಆರಂಭದಲ್ಲೇ ಬೆಂಕಿ ನಂದಿಸಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಕೆಲ ವಲಯಗಳಲ್ಲಿ ಅಗ್ನಿಶಾಮಕ ವಾಹನ ಮಾದರಿಯ ಮಿನಿ ವಾಟರ್ ಟ್ಯಾಂಕ್ ಬಳಕೆಗೆ ಸಿದ್ದಗೊಂಡಿವೆ. ಜತೆಗೆ ಬೆಂಕಿಯಿಂದ ಕಾಡನ್ನು ರಕ್ಷಸಲು ಅರಣ್ಯ ಇಲಾಖೆ ಸ್ಥಳಿಯರಿಗೂ ಅರಿವು ಮೂಡಿಸುತ್ತಿದೆ. ಬೇಸಿಗೆ ಬೆಂಕಿಯಿಂದ ಕಾಡನ್ನ ರಕ್ಷಿಸಲು ಕಾಡಂಚಿನ ಸಹಕಾರ ಸದ ಬೇಕೆಂದುಇ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

Key words: Forest Department –  summer- fires – fire lineconstruction work – Bandipur- forest range