ಮತ್ತೆ ಪಾಕ್ ಪರ ಘೋಷಣೆ: ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ವ್ಯಕ್ತಿ ಪೊಲೀಸರ ವಶಕ್ಕೆ…

ಉಡುಪಿ,ಮಾ,1,2020(www.justkannada.in):  ಹುಬ್ಬಳ್ಳಿಯ ಕೆಎಲ್ ಇ  ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿಗಳು ಮತ್ತು ಬೆಂಗಳೂರಿನಲ್ಲಿ ಅಮೂಲ್ಯ ಹಾಗೂ ಆರ್ದಾ ಪಾಕ್ ಪರ ಘೋಷಣೆ ಕೂಗಿದ ಬಳಿಕ ಇದೀಗ ಮತ್ತೆ ಪಾಕಿಸ್ತಾನ ಪರ ಕೂಗು ಮೊಳಗಿದೆ.

ಉಡುಪಿ ಜಿಲ್ಲೆ ಕುಂದಾಪುರದ ಮಿನಿ ವಿಧಾನಸೌಧ ಬಳಿ ರಾಘವೇಂದ್ರ ಎಂಬಾತ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾನೆ. ತಕ್ಷಣ ಈತನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಕುಂದಾಪುರ ಪೊಲೀಸ್ ಠಾಣಾಧಿಕಾರಿ ಹರೀಶ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಘೋಷಣೆ ಕೂಗಿರುವ ವ್ಯಕ್ತಿ ರಾಘವೇಂದ್ರ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದಾನೆ ಎನ್ನಲಾಗಿದೆ. ಈಗಾಗಲೇ ಪೊಲೀಸರು ರಾಘವೇಂದ್ರನನ್ನ ವಶಕ್ಕೆ ಪಡೆದಿದ್ದಾರೆ.

Key words: Pro-Pak –slogan- again-udupi- person-arrest